ನಂಜನಗೂಡು ದೊಡ್ಡಜಾತ್ರೆ ತೇರು ಎಳೆದು ಪುನೀತರಾದ ಸಾವಿರಾರು ಭಕ್ತರು

 

ನಂದಿನಿ ಮೈಸೂರು

ದಕ್ಷಿಣಕಾಶಿ ನಂಜನಗೂಡಿನ ಐತಿಹಾಸಿಕ ದೊಡ್ಡಜಾತ್ರೆ ವಿಜೃಂಭಣೆಯಿಂದ ನೆರವೇರಿದೆ.ಎರಡು ವರ್ಷಗಳ ನಂತರ ನಡೆದ ಐತಿಹಾಸಿಕ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದಾರೆ.

ಶ್ರೀಕಂಠೇಶ್ವರ ಪಾರ್ವತಿಯನ್ನ ಹೊತ್ತು ಸಾಗಿದ ರಥೋತ್ಸವವನ್ನ ವೀಕ್ಷಿಸಿದ ಭಕ್ತರು ಭಕ್ತಿಯ ಪರವಶತೆಯಿಂದ ಪುಳಕಿತರಾಗಿದ್ದಾರೆ.ನಂಜನಗೂಡಿಗೆ ಭಕ್ತಮಹಾಸಾಗರವೇ ಹರಿದು ಬಂದಿದೆ.ಇಂದು ಮುಂಜಾನೆ 3.30 ರಿಂದ 4.30 ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಪಂಚಮಹಾರಥೋತ್ಸವಕ್ಕೆ ರಾಜಮಾತೆ ಪ್ರಮೋದದೇವಿ ಒಡೆಯರ್ ಚಾಲನೆ ನೀಡಿದ್ದಾರೆ.

ಇಂದು ಮುಂಜಾನೆ 3 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದೆ.ದೇವಾಲಯದ ಪ್ರಾಂಗಣದಲ್ಲಿ ರಾಜಮಾತೆ ಪ್ರಮೋದದೇವಿ ಒಡೆಯರ್ ಬಿಲ್ವಪತ್ರೆ ಮೂಲಕ ಪಂಚರಥಗಳ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ
ಪ್ರಮೋದದೇವಿ ಒಡೆಯರ್ ಶಾಸಕ ಹರ್ಷವರ್ಧನ್ ಜಿಲ್ಲಾಧಿಕಾರಿ ಬಗಾದಿ ಗೌತಮ್ ಚಾಲನೆ ನೀಡುತ್ತಿದ್ದಂತೆಯೇ ರಥವನ್ನ ಭಕ್ತರು ಹರ್ಷೋದ್ಘಾರದಿಂದ ಎಳೆದಿದ್ದಾರೆ.ಶಿವನನ್ನ ಸ್ತುತಿಸುತ್ತಾ ರಥ ಗಳನ್ನುಎಳೆದು ಪುಳಕಿತರಾಗಿದ್ದಾರೆ.
ಮೊದಲಿಗೆ ಗಣಪತಿ ನಂತರ ದೊಡ್ಡ ರಥದಲ್ಲಿ ಶ್ರೀಕಂಠೇಶ್ವರ ,
ಸುಬ್ರಹ್ಮಣ್ಯ, ಚಂಡಿಕೇಶ್ವರ ,ಪಾರ್ವತಿದೇವಿ, ಸೇರಿದಂತೆ ಪಂಚ ರಥಗಳು ರಥಬೀದಿಯಲ್ಲಿ ಸಾಗಿದವು .ರಥೋತ್ಸವಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 500 ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.50 ಕ್ಕೂ ಹೆಚ್ಚು ಸಿಸಿ ಟಿವಿ ಗಳನ್ನ ಅಳವಡಿಸಲಾಗಿದೆ.ಕೊರೊನಾ ಭೀತಿಯನ್ನ ಲೆಕ್ಕಿಸದ ಭಕ್ತರು ಪಂಚಮಹಾರಥೋತ್ಸವವನ್ನ ಕಣ್ತುಂಬಿ ಕೊಂಡಿದ್ದಾರೆ.ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬೆಳಿಗ್ಗೆ 5 -30ಕ್ಕೆಹೊರಟ ರಥಗಳು 8ಘಂಟೆ ಹೊತ್ತಿಗೆ ಯಾವುದೇ ಅಹಿತಕರ ಘಟನೆ ಸಂಭವಿಸದೆ ಸ್ವಸ್ಥಾನ ಸೇರಿದವು ರಥೋತ್ಸವದ ವೇಳೆ ಭಕ್ತರು ಹಣ್ಣು ಧ್ವನಿ ಎಸೆದು ತಮ್ಮ ಭಕ್ತಿಭಾವ ಮೆರೆದರು.

Leave a Reply

Your email address will not be published. Required fields are marked *