ಮಾ.20 ರಂದು ” ಮತ್ತೆ ಮುಖ್ಯಮಂತ್ರಿ ” ನಾಟಕ

ಮೈಸೂರು: 16 ಮಾರ್ಚ್ 2022

ನಂದಿನಿ ಮೈಸೂರು

ಕಲಾ ಗಂಗೋತ್ರಿ ಅಭಿನಯಿಸುವ ಹೊಸ ನಾಟಕ ಮತ್ತೆ ಮುಖ್ಯಮಂತ್ರಿ ನಾಟಕದ ಪೋಸ್ಟರ್ ಬಿಡುಗಡೆಗೊಂಡಿತು.

ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಮಾ.20 ರಂದು ಪ್ರದರ್ಶನಗೊಳ್ಳುವ ನಾಟಕದ ಪ್ರಧಾನ ಪಾತ್ರದಲ್ಲಿರುವ ಡಾ.ಮುಖ್ಯಮಂತ್ರಿ ಚಂದ್ರು ಮತ್ತು ನಾಟಕದ ನಿರ್ದೇಶ ಬಿವಿ ರಾಜಾರಾಂ ಮತ್ತು ಪ್ರಕಾಶಕ ಗಣೇಶ್ ಅಮೀನಗಡ ಅವರ ‘ಮತ್ತೆ ಮುಖ್ಯಮಂತ್ರಿ ಎಂಬ ಹೊಸ ನಾಟಕ ಪೋಸ್ಟರ್ ಬಿಡುಗಡೆ ಮಾಡಿದರು.

ಇದೊಂದು ರಾಜಕೀಯ ಆತ್ಮಾವಲೋಕನ ನಾಟಕ,ನಮ್ಮ ದೇಶದಲ್ಲಿ ಕಳೆದ 75 ವರ್ಷಗಳಿಂದ ನಡೆದು ಬರುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ನಡೆಸಿರುವ ಪ್ರಯನ್ನವಾಗಿದೆ.
ರಾಜಕೀಯದೊಂದಿಗೆ ಇಂದಿಗೂ ಪ್ರಸ್ತುತವಾಗಿರುವ ಜನಪ್ರಿಯ ನಾಟಕ ‘ಮುಖ್ಯಮಂತ್ರಿ’ಯ ಹೊಸ ಆವೃತ್ತಿಯಾದ ‘ಮತ್ತೆ ಮುಖ್ಯಮಂತ್ರಿ’ ಮಾರ್ಚ್ 20 ರಂದು ಸಂಜೆ 7 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದೆ ಎಂದರು.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಸುದ್ದಿಗಾರರ ಪ್ರಶ್ನೇಗೆ ಉತ್ತರಿಸಿದ ಅವರು ನಾನು ದಿ ಕಾಶ್ಮೀರ್ ಫೈಲ್ ಸಿನಿಮಾ ನೋಡಿಲ್ಲ.ಆಗಾಗಿ ನಾನು ಸಿನಿಮಾದ ಬಗ್ಗೆ ಪ್ರತಿಕ್ರೀಯೆ ನೀಡೋದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ರಂಗಾಯಣದ ಮಾಜಿ ನಿರ್ದೇಶಕ ಬಿ ವಿ ರಾಜಾರಾಂ ಮಾತನಾಡಿ ಕಲಾಗಂಗೋತ್ರಿ ತಂಡವು 1971 ರಲ್ಲಿ ಸ್ಥಾಪನೆಯಾಯಿತು.ಈಗ 50 ವರ್ಷಗಳನ್ನು ಪೂರೈಸಿದೆ. ‘ಮುಖ್ಯ ಮಂತ್ರಿ’ 775 ಶೋ ಪ್ರದರ್ಶನಗೊಂಡಿದೆ. ಈಗ ನಾವು ಹೊಸ ರಾಜಕೀಯ ನಾಟಕವನ್ನು ಪ್ರದರ್ಶಿಸಲಿದ್ದೇವೆ.
ಬೆಂಗಳೂರಿನಲ್ಲಿ ಈಗಾಗಲೇ ಪ್ರದರ್ಶನಗೊಂಡಿರುವ ನಾಟಕವನ್ನು ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಮಾರ್ಚ್ 20 ರಂದು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *