ಸೈಲೆಂಟಾಗಿ ಬಂದು ಸೈಲೆಂಟಾಗಿಯೇ ಹೋಗಬೇಕು ನೋ ಸೌಂಡ್, ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

 

ಬೆಂಗಳೂರು:5 ಸೆಪ್ಟೆಂಬರ್ 2021

ನ@ದಿನಿ 

                       ಗಣೇಶ ಹಬ್ಬಕ್ಕೆ ಬಂದ್ನಾ ಕಡುಬು, ನೈವೇದ್ಯ, ಹಣ್ಣು ಹಂಪಲು ತಿಂದ್ನಾ ಹಬ್ಬ ಮುಗಿಸಿಕೊಂಡು ಹೋದ್ನಾ ಅಂತ ಇರಬೇಕು.ಹಬ್ಬಕ್ಕೆ ಬಂದವನು ಶಾಲಾ ಕಾಲೇಜ್ ಗೆ ಹೋಗ್ತೀನಿ ಅಂತ ಹಠ ಮಾಡಿದ್ರೇ ಬಿಡೋದಿಲ್ಲ. ಗಣಪ ಸೈಲೆಂಟಾಗಿ ಬಂದು ಸೈಲೆಂಟಾಗಿಯೇ ಹೋಗಬೇಕು.ಮೆರವಣಿಗೆ, ವಾದ್ಯ ಮೇಳ,ಡಿಜೆ ಗೆ ಎಂಟ್ರಿನೇ ಇಲ್ಲ ಅಂತ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಷರತ್ತು ಬದ್ದ ಅನುಮತಿ‌ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಕೋರೋನಾ ಮೂರನೇ ಅಲೆ ಗಮನದಲ್ಲಿಟ್ಟುಕೊಂಡು ಸಚಿವರು ಹಾಗೂ ತಜ್ಞರು ಸಭೆ ನಡೆಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡುವ ತೀರ್ಮಾನ ಕೈಗೊಂಡಿದೆ.

ಸಾರ್ವಜನಿಕ ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು.ಗ್ರಾಮಕ್ಕೆ 1,ವಾರ್ಡ್ ಗಳಲ್ಲಿ 1 ಗಣೇಶ ಸ್ಥಾಪಿಸಬೇಕು 50*50 ಪೆಂಡಾಲಿಗೆ ಅವಕಾಶ, ಅದ್ಧೂರಿ ಆಚರಣೆ ಇರಂಗಿಲ್ಲ, ಯಾವುದೇ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ, ಹೆಚ್ಚು ಜನ ಸೇರಂಗಿಲ್ಲ.ಗಡಿ ಭಾಗದಲ್ಲಿ 2% ಗಿ‌ಂತ ಕಡಿಮೆ ಇರುವ ಕಡೆ ಮಾತ್ರ ಆಚರಣೆಗೆ ಅವಕಾಶ ನೀಡಲಾಗಿದೆ.ಸರಳ ಸಾಂಪ್ರದಾಯಿಕವಾಗಿ ಗಣೇಶ ಪೂಜೆಗೆ ಮಾತ್ರ ಅವಕಾಶ.ಪರಿಸರ ಸ್ನೇಹಿ ಗಣಪತಿಯನ್ನೇ ಪೂಜಿಸಬೇಕು.

ಗಣೇಶ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲೂ ಮೆರವಣಿಗೆ, ಡಿಜೆಗೆ ಅವಕಾಶ ಇರೋದಿಲ್ಲ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು .ರಾಜ್ಯದಲ್ಲಿ 5 ದಿನ ಮಾತ್ರ ಗಣೇಶೋತ್ಸವ ಆಚರಣೆಗೆ ಅವಕಾಶವಿದ್ದು.ಗಣೇಶನ ಎತ್ತರ 3 ಅಡಿ ಇರಬೇಕು ಎಂದು ಷರತ್ತು ಬದ್ಧ ಅನುಮತಿ ನೀಡಲಾಗಿದೆ.

Leave a Reply

Your email address will not be published. Required fields are marked *