ಗೋವಾ ಬಾಕ್ಸಿಂಗ್ ಚಾಂಪಿಯನ್ಸ್ನಲ್ಲಿ ಸ್ಪರ್ಥಿಸಲಿದ್ದಾಳೆ ಮೈಸೂರಿನ ಹುಡ್ಗಿ

 

 

ಮೈಸೂರು:5 ಸೆಪ್ಟೆಂಬರ್ 2021

*ಸ್ಪೇಷಲ್ ಸ್ಟೋರಿ: ನ@ದಿನಿ*

                     ನಾಲ್ಕು ಹೆಣ್ಣು ಮಕ್ಕಳು ಹುಟ್ಟಿದ್ರು ಅಂತ ತಂದೆ ಚಿಕ್ಕ ವಯಸ್ಸಿನಲ್ಲೇ ಬಿಟ್ಟೋದ್ರೂ,ಗಂಡ ಬಿಟ್ಟೋದಾ ನನ್ನ ಮಕ್ಕಳಿಗೆ ಯಾರು ಗತಿ ಎಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ರೂ ಸಂಕಷ್ಟದ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಆಶ್ರಯ ನೀಡಿ ಬಿಬಿ ಫಾತಿಮಾಳನ್ನ ಬಾಕ್ಸಿಂಗ್ ಚಾಂಪಿಯನ್ ಆಗಿ ಹೊರ ಹೊಮ್ಮುವಂತೆ ಮಾಡಿದ್ದು
ಆ ಮಂಗಳಮುಖಿ.

                     ಹೌದು ,ಈಗೇ ಕೊರಳಲ್ಲಿ ಹತ್ತಾರು ಪದಕಗಳನ್ನ ಹಾಕಿಕೊಂಡಿರುವ ಈಕೆ ಹೆಸರು ಬಿಬಿ ಫಾತಿಮಾ.ಯುಜಿಎಕೆ,ಯು
ಜಿಎಫ್ ಐ,ಡಬ್ಲ್ಯೂಯುಜಿಎಫ್ ವತಿಯಿಂದ ಸೆ.10 ರಿಂದ 12 ರವರಗೆ ಗೋವಾದಲ್ಲಿ ನಡೆಯಲಿರುವ ಕರ್ನಾಟಕ ಗೇಮ್ಸ್ ಬಾಕ್ಸಿಂಗ್ ಚಾಂಪಿಯನ್ಸ್ ಷಿಪ್ 2021ರಲ್ಲಿ ಭಾಗವಹಿಸಲಿದ್ದಾರೆ.ರಾಜೀವ್ ನಗರದಲ್ಲಿರುವ ಎಲೈಟ್ ಅಕಾಡೆಮಿಯಲ್ಲಿ ಕಳೆದ 3 ವರ್ಷಗಳಿಂದ ಕೋಚ್ ಮೊಹಮದ್ ರವರು ಫಾತಿಮಾಳಿಗೆ ಉಚಿತವಾಗಿ ತರಭೇತಿ ನೀಡುತ್ತಿದ್ದಾರೆ‌

                   ತಂದೆಯಿಂದ ದೂರವಾದ ಫಾತಿಮಾಳಿಗೆ ಆಸೆರೆಯಾಗಿರು ಮಂಗಳಮುಖಿ ಅಕ್ರಂ ಪಾಷಾ.ಬೀದಿ ಬೀದಿ ತಿರುಗಿ ಭಿಕ್ಷೇ ಬೇಡಿ ಕುಟುಂಬವನ್ನ ಸಾಕುತ್ತಿದ್ದಾರೆ.ಕ್ರೀಡಾ ಪ್ರತಿಭೆ ಫಾತಿಮಾ ರಾಜ್ಯ,ಜಿಲ್ಲಾ ಮಟ್ಟದಲ್ಲಿ 10 ಚಿನ್ನ ,5 ಬೆಳ್ಳಿ ಪದಕ ಬಾಚಿಕೊಂಡಿದ್ದಾಳೆ.

                     ಸೇನೆಗೆ ಸೇರುವ ಆಸೆ ಇದೆ ಎಂದ ಫಾತಿಮಾ.ಮುಂದೆ ಒಲಂಪಿಕ್ಸ್ ನಲ್ಲಿ ಭಾಗವಹುಸಬೇಕು.ಒಲಿಂಪಿಕ್ಸ್ ನಲ್ಲಿ ಸ್ಪರ್ಥಿಸಿ ಭಾರತಕ್ಕೆ ಪದಕ ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.ಗೋವಾ ಪ್ರಯಾಣಕ್ಕೆ ದಾನಿಗಳು ಸಹಾಯ ಮಾಡುವಂತೆ ಅಕ್ರಂ ಪಾಷ ಹಾಗೂ ಪ್ರಣತಿ ಪ್ರಕಾಶ್ ಮನವಿ ಮಾಡಿದ್ದಾರೆ.

                        ಒಟ್ಟಾರೆ ಹೇಳೋದಾದರೇ ಮಂಗಳಮುಖಿ ಕಂಡರೇ ಸಾಕು ಕೀಳಾಗಿ ನೋಡುವ ಜನರ ಮಧ್ಯೆ ಫಾತೀಮಾ ಕುಟುಂಬಕ್ಕೆ ವೃಕ್ಷವಾಗಿ ನಿಂತಿರುವ ಅಕ್ರಂ ಪಾಷಗೆ ಒಂದು ಧನ್ಯವಾದ ಹೇಳಲೇಬೇಕು.

Leave a Reply

Your email address will not be published. Required fields are marked *