ಆನೆ ದಾಳಿ ಉಸಿರು ಚೆಲ್ಲಿದ ಅರಣ್ಯ ರಕ್ಷಕ

 

ವೀರನಹೊಸಳ್ಳಿ:6 ಸೆಪ್ಟೆಂಬರ್ 2021

ದಾ ರಾ ಮಹೇಶ್

ಆನೆ ದಾಳಿಗೆ ಅರಣ್ಯ ರಕ್ಷಕನೋರ್ವ ಉಸಿರು ಚೆಲ್ಲಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ
ವೀರನಹೊಸಹಳ್ಳಿ ಅರಣ್ಯ ವಲಯದ ಜಿ ಎಂ ಹಳ್ಳಿಯಲ್ಲಿ ನಡೆದಿದೆ.

ಅರಣ್ಯ ರಕ್ಷಕ ಹನುಮಂತು ಮೃತ ದುರ್ದೈವಿ. ಮಧ್ಯರಾತ್ರಿ ಸಮಯದಲ್ಲಿ ಕಾಡಾನೆಯನ್ನು ಜಮೀನುಗಳಿಗೆ ಹೋಗದಂತೆ ತಡೆಗಟ್ಟುವಾಗ ಹಠಾತ್ ದಾಳಿ ನಡೆಸಿದ ಹಿನ್ನಲೆ ಗುಂಪಿನಲ್ಲಿದ್ದ ಹನುಮಂತು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಡಿಸಿಎಫ್ ಮಹೇಶ್ ಕುಮಾರ್ ಎಸಿಎಫ್ ಸತೀಶ್ ಆರ್ ಎಪ್ ಓ ನಮಂ ನಾರಾಯಣ ನಾಯಕ ಭೇಟಿ ಪರಿಶೀಲನೆ ನಡೆಸಿ
ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಮೃತ ದೇಹ ಹಸ್ತಾಂತರಿಸಿದ್ದಾರೆ.ಸ್ಥಳದಲ್ಲಿ
ಕುಟುಂಬಸ್ಥರ ಆಕ್ರಂದನ
ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *