ಮುಚ್ಚಿರುವ ಸಾಂತ್ವಾನ ಕೇಂದ್ರ,ಗೌರವಧನ ವಿಳಂಬ ಧೋರಣೆ ವಿರೋಧಿಸಿ ಮಹಿಳಾ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು:6 ಸೆಪ್ಟೆಂಬರ್ 2021

ಸಾಂತ್ವಾನ ಕೇಂದ್ರಗಳನ್ನು ಮುಚ್ಚಿರುವುದನ್ನು ಹಾಗೂ ಗೌರವಧನ ನೀಡಿಕೆಯಲ್ಲಿ ವಿಳಂಬ ಧೋ ರಣೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.

ನಗರದ ಫ್ರೀಡಂ ಪಾರ್ಕ್ನಲ್ಲಿ ಜಮಾಯಿಸಿದ ಮಹಿಳಾ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ರಾಜ್ಯ ಸರ್ಕಾರ ಅನುದಾನದ ನೆಪವೊಡ್ಡಿ ರಾಜ್ಯಾದ್ಯಂತ ೭೨ ಮಹಿಳಾ ಕೇಂದ್ರಗಳನ್ನು ಏಕಾಏಕಿ ಮುಚ್ಚಿದೆ. ಇದರಿಂದ ಸಾಕಷ್ಟು ಮಹಿಳಾ ಕಾರ್ಯಕರ್ತರು ಉದ್ಯೋಗ ಕಳೆದುಕೊಂಡಿದ್ದು, ಬದುಕು ಬೀದಿಗೆ ಬೀಳುವಂತಾಗಿದೆ. ಹಾಗೇ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಸಮಯಕ್ಕೆ ಸರಿಯಾಗಿ ಗೌರವಧನ ನೀಡದ ಕಾರಣ ಜೀವನ ನಡೆಸಲು ಕಷ್ಟಕರವಾಗಿದೆ. ಹೀಗಾಗಿ ತಮ್ಮ ಮನವಿಯನ್ನು ಸ್ವೀಕರಿಸಿ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡುವ ತನಕ ಧರಣಿ ನಿಲ್ಲಿಸುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನು, ಬಿರುಬಿಸಲಿಲನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದರೂ ಈವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಪ್ರತಿಭಟನಾಕಾರರ ಬಳಿ ಸುಳಿಯದಿರುವುದು ಪ್ರತಿಭಟನಾಕಾರರ ಅಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು ಭಾಗದಿಂದ ರತ್ನಮ್ಮ ನರಸೇಗೌಡ, ಮಹಿಳಾ ಹೋರಾಟಗಾರ್ತಿ ಡಾ.ಇಸಾಬೆಲ್ಲಾ ಹಾಗೂ ಹೆಚ್.ಡಿ.ಕೋಟೆ ಮಹಿಳಾ ಕೇಂದ್ರ ಕಾರ್ಯಕರ್ತೆ ಜಶೀಲಾ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು.

Leave a Reply

Your email address will not be published. Required fields are marked *