ವಿಶ್ವ ಜನಸಂಖ್ಯಾ ದಿನಾಚರಣೆ

1,366 Views

ಎಚ್.ಡಿ.ಕೋಟೆ:18 ಜುಲೈ 2022

ನಂದಿನಿ ಮೈಸೂರು

ಹೆಚ್. ಡಿ ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ” ಮಹದೇವ್ ಪ್ರಸಾದ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ “ಟಿ. ರವಿಕುಮಾರ್ ರವರು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ,ಜನಸಂಖ್ಯೆ ನಿಯಂತ್ರಣ ಹಾಗೂ ಸ್ಥಿರತೆಯನ್ನು ಸಾಧಿಸಲು ಶಾಶ್ವತ ವಿಧಾನಗಳಲ್ಲಿ , ಪುರುಷರಿಗೆ NSV ಹಾಗೂ ಮಹಿಳೆಯರಿಗೆ ಟುಬೆಕ್ಟಮಿ , ಲ್ಯಾಪ್ರೊಸ್ಕೋಪಿಕ್, ಬಗ್ಗೆ ಹಾಗೂ ತಾತ್ಕಾಲಿಕ ವಿಧಾನಗಳಾದ IUCD,PPIUCD,PAIUCD, ಅಂತರ ,ಛಾಯಾ, ನುಂಗುವ ಮಾತ್ರೆ,ಪುರುಷರಿಗೆ ನಿರೋದ್ ಉಪಯೋಗಿಸುವಂತೆ ಸಮುದಾಯದಲ್ಲಿ ಅರ್ಹ ದಂಪತಿಗಳಿಗೆ ಮನವೊಲಿಸುವಂತೆ ತಿಳಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿ ವರ್ಗದವರು, ಸಮುದಾಯ ಆರೋಗ್ಯ ಧಿಕಾರಿಗಳು, ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *