ವನ ಮಹೋತ್ಸವ ಹಾಗೂ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮ

130 Views

ಮಂಡ್ಯ:19 ಜುಲೈ 2022

ನಂದಿನಿ ಮೈಸೂರು

ನಮ್ಮ ಸುಧಾಮೂರ್ತಿ ಸೇವಾ ಬಳಗ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯ ದಲ್ಲಿ ವನ ಮಹೋತ್ಸವ ಹಾಗೂ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಮಂಡ್ಯ ಜಿಲ್ಲೆ ಭಾರತಿನಗರ ಸಮೀಪ ದಲ್ಲಿರುವ ಚಂದೂಪುರ ಗ್ರಾಮದಲ್ಲಿ ಕಾರ್ಯಕ್ರಮ ಆಯೋಗಿಸಲಾಗಿತ್ತು.

ಪರಿಸರ ದಿನದ ಪ್ರಯುಕ್ತ 30ಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸಿದರು, ಪರಿಸರದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತ ರಾದ ಮಕ್ಕಳಿಗೆ ಬಹುಮಾನ ವಿತರಿಸುದರು ಹಾಗೂ ಜನ ಸಂಖ್ಯೆ ಜಾಗೃತಿ ಬಗ್ಗೆ ಅರೋಗ್ಯ ಇಲಾಖೆ ಯವರಿಂದ ಜಾಗೃತಿ ಮೂಡಿಸಿದರು.

ಇದೇ ಸಂದರ್ಭಲ್ಲಿ ಡಾ.ರವೀಂದ್ರ, ಸುಧಾಮೂರ್ತಿ ಸೇವಾ ಬಳಗ ಅಧ್ಯಕ್ಷೆ ವಸಂತ ವೆಂಕಟಾಚಲಯ್ಯ, ಕಾರ್ಯದರ್ಶಿ ಸುಜಾತ, ಸಾಶ್ಯರುಗಳಾದ ಶೋಭಾ, ಗೀತಾ, ಅನಿತಾ, ಲೀಲಮ್ಮ, ಮಮತಾ, ಅಂಬಿಕಾ ಮಹಾದೇವಮ್ಮ, ಶಾಲೆಯ ಎಲ್ಲಾ ಶಿಕ್ಷಕ ರು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *