ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ : ಬಿಇಒ ಬಸವರಾಜು

ಪಿರಿಯಾಪಟ್ಟಣ:18 ಜುಲೈ 2022

ಸತೀಶ್ ಆರಾಧ್ಯ / ನಂದಿನಿ ಮೈಸೂರು

 ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಬಿಇಒ ಬಸವರಾಜು ಹೇಳಿದರು.

ತಾಲ್ಲೂಕಿನ ಚಾಣಕ್ಯ ಶಾಲೆ ಆವರಣದಲ್ಲಿ ನಡೆದ ಬೆಟ್ಟದಪುರ ಹೋಬಳಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಗೆ ದೈಹಿಕ ಶಿಕ್ಷಣ ಸಹ ಪ್ರಮುಖ ಪಾತ್ರ ವಹಿಸುತ್ತದೆ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಿಸ್ತು, ಸಂಯಮ, ತಾಳ್ಮೆ ಹಾಗೂ ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು ಎಂದರು.

ಚಾಣಕ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಜಗದೀಶ್ ಅವರು ಮಾತನಾಡಿ ಈ ಬಾರಿಯ ಬೆಟ್ಟದಪುರ ಹೋಬಳಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ನಮ್ಮ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವುದು ಸಂತಸಕರ ಎಂದು ತಿಳಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಯ್ಯ ಅವರು ಮಾತನಾಡಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಕ್ರೀಡಾಭಿಮಾನ ಬೆಳೆಸಿಕೊಳ್ಳುವಂತೆ ಕೋರಿದರು.

ಕ್ರೀಡಾಕೂಟದಲ್ಲಿ ಬೆಟ್ಟದಪುರದ ಚಾಣಕ್ಯ,

ಎಸ್ಎಂಎಸ್, ಡಿಟಿಎಂಎನ್, ಎಸ್ ಸಿವಿಡಿಎಸ್, ಸರ್ಕಾರಿ ಪ್ರೌಢಶಾಲೆ, ಹಲಗನಹಳ್ಳಿಯ ಮುರಾರ್ಜಿ, ರೋಷನ್, ಮೌಲಾನಾ ಆಜಾದ್, ಅತ್ತಿಗೋಡು ಬೆಟ್ಟದತುಂಗ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಕೋಮಲಾಪುರದ ಶ್ರೀರಾಮ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಈ ಸಂದರ್ಭ ಚಾಣಕ್ಯ ಶಾಲೆಯ ಉಪಾಧ್ಯಕ್ಷ ಜಯಣ್ಣ, ನಿರ್ದೇಶಕರಾದ ಯದುರಾಜ್, ಹರೀಶ್, ಮುಖ್ಯಶಿಕ್ಷಕ ತಿಮ್ಮಯ್ಯ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ಇಸಿಒ ಸತೀಶ್, ದೈಹಿಕ ಶಿಕ್ಷಕರಾದ ರಘುಪತಿ, ನಿಂಗರಾಜ್, ಬೆಟ್ಟದಪುರ ಹೋಬಳಿ ವಲಯ ಮಟ್ಟದ ಪ್ರೌಢಶಾಲೆಗಳ ಶಿಕ್ಷಕರು ಇದ್ದರು. 

Leave a Reply

Your email address will not be published. Required fields are marked *