ಮರದ ಕೊಂಬೆ ಬಿದ್ದು ತಲೆ ಬುರುಡೆ ಮತ್ತು ಮೆದುಳಿಗೆ ತೀವ್ರ ಪೆಟ್ಟು ಚಿಕಿತ್ಸೆಗೆ ಬೇಕಿದೆ ನಿಮ್ಮ ಸಹಾಯ ಹಸ್ತ

 

ನಂದಿನಿ ಮೈಸೂರು

ಮರದ ಕೊಂಬೆ ಬಿದ್ದು ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಗೋಕುಲಂನಲ್ಲಿ ನಡೆದಿದೆ.

ಶ್ರವಣ ಬೆಳಗೊಳದ ಅಂಕನಹಳ್ಳಿಯ ನಿವಾಸಿ ಸುದೀಪ್ (೨೪) ಅವರ ಮೇಲೆ ಮರದ ಕೊಂಬೆ ಬಿದ್ದು ತಲೆ ಬುರುಡೆ ಮತ್ತು ಮೆದುಳಿಗೆ ತೀವ್ರ ಪೆಟ್ಟಾಗಿದ್ದು, ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ಸಂದರ್ಭದಲ್ಲಿದ ಅವರ ಸಹೋದರ ಲತೀಶ್  ಮಾತನಾಡಿ ನಮದ್ದು ರೈತಾಪಿ ವರ್ಗದ ಕುಟುಂಬ ಕೆಲಸಕ್ಕಾಗಿ ನಾನು ಮತ್ತು ನನ್ನ ತಮ್ಮ ಸುದೀಪ್ ಇಬ್ಬರು ಮೈಸೂರಿಗೆ ಬಂದಿದ್ದೇವೆ. ಆದರೆ ನಾನು ಎಲೆಕ್ಟ್ರೀಕಲ್ ಕೆಲಸ ಮಾಡಿಕೊಂಡಿದ್ದೇನೆ. ಸಹೋದರ ಸುದೀಪ್ ಮೈಸೂರಿನ ಖಾಸಗಿ ವಾಷಿಂಗ್ ಮಿಷಿನ್ ಸರ್ವಿಸ್ ಸಂಸ್ಥೆಯಲ್ಲಿ ಸರ್ವಿಸ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅದರಂತೆ (ಜ.೧೩) ಗೋಕುಲಂನ ಬಬ್ಬ ಗ್ರಾಹಕರ ಮನೆಗೆ ಸರ್ವಿಸ್‌ಗೆ ತೆರಳಿ ತಮ್ಮ ಬೈಕ್ ಮೂಲಕ ವಾಪಸ್ ಆಗುವ ವೇಳೆ ಬೃಹತ್ ಮರದ ಕೊಂಬೆಯೊಂದು ಅವರ ತಲೆ ಮೇಲೆ ಬಿದ್ದು, ಅವರ ಮೆದುಳಿಗೆ ತೀವ್ರವಾಗಿ ಪೆಟ್ಟಾಗಿದ್ದು, ಅವರು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಇದ್ದಾರೆ.

ಚಿಕಿತ್ಸೆಗೆ ಅಂದಾಜು ೧೨ ಲಕ್ಷ ರೂ.ಗಳು ಖರ್ಚು ತಗುಲಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಸಾಲ ಹಾಗೂ ಸ್ನೇಹಿತರ ಸಹಾಯದ ಮೂಲಕ ೯ ಲಕ್ಷ ರೂ. ಗಳನ್ನು ಚಿಕಿತ್ಸೆಗೆ ಭರಿಸಲಾಗಿದೆ. ಬಾಕಿ ಹಣವನ್ನು ಹೇಗೆ ಹೊಂದಿಸುವುದು ಎಂಬುದೇ ಚಿಂತೆಯಾಗಿದೆ ಎಂದರು.
ಅಧಿಕಾರಿಗಳೆ ಹೊಣೆ : ಮೈಸೂರು ನಗರದಾದ್ಯಂತ ಹಲವಾರು ಬೃಹತ್ ಮರಗಳು ಒಣಗಿನಿಂತಿದ್ದು, ಅವುಗಳನ್ನು ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳು ತೆರವುಮಾಡದ ಕಾರಣ ಇಂದು ನನ್ನ ಸೋದರನ ಈ ಸ್ಥಿತಿಗೆ ನೇರ ಹೊಣೆಯಾಗಿದ್ದಾರೆ. ಈ ಸಂಬಂಧ ಮೈಸೂರಿನ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲೂ ಸಹ ಪ್ರಕರಣವನ್ನು ದಾಖಲು ಮಾಡಲಾಗಿದೆ. ಸೋದರನ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣವಾಗಿ ಪಾಲಿಕೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭರಿಸಿಬೇಕು. ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಹಾಯ ಹಸ್ತ ಭಾರತ್ ನ್ಯೂಸ್ ಅಭಿಯಾನ

Contact no-8970272377 latheesha a n patient brother

Pay to below account details
Phone pay/Google pay 9741046240 latheesha A N patient brother and
INDIAN BANK peenya industrial estate Bangalore
Ac no:- 6606318739
IFSC:- IDIB000P081
Ac holder name:- Latheesha A N

Leave a Reply

Your email address will not be published. Required fields are marked *