ತಹಶೀಲ್ದಾರ್ ಡಾ.ಪ್ರದೀಪ್ ಹಿರೇಮಠ ಮೇಲೆ ಹಲ್ಲೆ ಖಂಡಿಸಿ ಸರ್ಕಾರಿ ನೌಕರರಿಂದ ಡಿಸಿ ಗೆ ಮನವಿ

ಮೈಸೂರು:29 ಜನವರಿ 2022

ನಂದಿನಿ ಮೈಸೂರು

ಬೀದರ್‌ ಜಿಲ್ಲೆಯ ಹುಮ್ಮಾಬಾದ್ ತಾಲ್ಲೂಕಿನ ತಹಶೀಲ್ದಾರ್ ರವರ ಮೇಲೆ ಹಲ್ಲೆ ನಡೆಸಿರುವ ದಲಿತ ಸಂಘರ್ಷ ಸಮಿತಿಯ ಸದಸ್ಯರು ಗಳನ್ನು ಬಂಧಿಸಿ ಗೂಂಡಾಕಾಯ್ದೆ ಅಡಿ ಕಾನೂನು ಕ್ರಮ ಜರುಗಿಸುವ ಮೂಲಕ ನೌಕರರಿಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮೈಸೂರು ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ರಾಜ್ಯಾಧ್ಯಕ್ಷ ಶಡಾಕ್ಷರಿರವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ಜೆ.ಗೋವಿಂದರಾಜು ನೇತೃತ್ವದಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ರವರಿಗೆ ಮನವಿ ಸಲ್ಲಿಸಿದರು.

ನೆನ್ನೇ ಬಿದಲ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ತಹಶೀಲ್ದಾರ್ ಡಾ. ಪ್ರದೀಪ್ ಹಿರೇಮಠ ಅವರು ಕಾರ್ಯನಿರತ ರಾಗಿದ್ದ ಸಂಧರ್ಭದಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿ ಕಛೇರಿಯ ಪೀಠೋಪಕರಣ ಗಳನ್ನು ಧ್ವಂಸ ಮಾಡಿರುವ ದಲಿತ ಸಂಘರ್ಷ ಸಮಿತಿಯ ಸದಸ್ಯರ ಈ ನಡೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲ . ಇತ್ತೀಚೆಗೆ ಸರ್ಕಾರಿ ಅಧಿಕಾರಿ ನೌಕರರ ಮೇಲೆ ಹಲ್ಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು , ಸೂಕ್ತ ರಕ್ಷಣೆ ಇಲ್ಲದೇ ಆತಂಕ ಹಾಗೂ ಭಯದಲ್ಲಿ ನೌಕರರು ಕರ್ತವ್ಯ ನಿರ್ವಹಿಸುತ್ತಿರು ಪರಿಸ್ಥಿತಿ ಉದ್ಭವಿಸಿರುವುದನ್ನು ಗಮನಿಸಲಾಗಿದೆ.ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಸದಸ್ಯರುಗಳನ್ನು ಗೂಂಡಾಕಾಯ್ದೆ ಅಡಿ ಬಂಧಿಸಿ ಅವರ ವಿರುದ್ಧ ಕಾನೂನು ರೀತಿ ಕ್ರಮವನ್ನು ಜರುಗಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ರೇವಣ್ಣ ಮಾತನಾಡಿ ಇತ್ತೀಚಿಗೆ ಕರ್ನಾಟಕ ಸರ್ಕಾರಿ ನೌಕರರ ಮೇಲೆ ಹಲ್ಲೆಯಾಗುತ್ತಿದೆ.ನೆನ್ನೇ ಕೂಡ ಕರ್ತವ್ಯನಿರತ ಹುಮ್ನಾಬಾದ್ ತಹಶಿಲ್ದಾರರಾದ ಡಾ.ಪ್ರದೀಪ್ ಹಿರೇಮಠ ಮೇಲೆ ಹಲ್ಲೆ ನಡೆಸಿದ್ದಾರೆ.ಘಟನೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.ಜಿಲ್ಲಾಧಿಕಾರಿಗಳು ಕೂಡ ಅಲ್ಲಿನ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

ರಮೇಶ್,ರಮೇಶ್ ಕುಮಾರ್, ವರದರಾಜು,ರೇವಣ್ಣ,ಕನಕರಾಜು,ಉಮೇಶ್,ಗಿರೀಶ್,ಮಂಜುನಾಥ್,ಸತೀಶ್ ಜವರೇಗೌಡ,ಅಕ್ಕಮ್ಮ ,ವೀಣಾ,ರೇವಣ್ಣ ಹಾಜರಿದ್ದರು.

Leave a Reply

Your email address will not be published. Required fields are marked *