ಮೈಸೂರು:4 ಜುಲೈ 2022
ನಂದಿನಿ ಮೈಸೂರು
ಪ್ಲಾಸ್ಟಿಕ್ ಮುಕ್ತ ಮೈಸೂರನ್ನಾಗಿ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ.
ವಲಯ ಕಚೇರಿ ಒಂದರ ವ್ಯಾಪ್ತಿಗೆ ಬರುವ ಎಂಜಿ ರಸ್ತೆ , ಮಳಿಗೆ, ಕೈ ಗಾಡಿ ,ಸೇರಿದಂತೆ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಪರಿಸರ ಇಂಜಿನಿಯರ್ ಶಿಲ್ಪ ಮಾತನಾಡಿ ಸರ್ಕಾರ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದೆ.ಅದರಂತೆ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸಬಾರದು ಅಂತ ಮನವಿ ಮಾಡಿದ್ದೇವೆ.ಮನವಿಗೂ ಸ್ಪಂದಿಸದ ವ್ಯಾಪಾರಿಗಳ ಬಳಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದೇವೆ.5 ಸಾವಿರದಿಂದ 3 ಲಕ್ಷದವರೆಗೂ ದಂಡ ವಿಧಿಸಿದ್ದೇವೆ.ಬೀದಿ ಬದಿ ವ್ಯಾಪಾರಿಗಳಿಗೆ 100 ರಿಂದ 500 ರೂವರಗೆ ದಂಡ ವಿಧಿಸುತ್ತೇವೆ.ದಯವಿಟ್ಟು ಯಾರು ಪ್ಲಾಸ್ಟಿಕ್ ಬಳಸಬೇಡಿ ಬದಲಿಗೆ ಬಟ್ಟೆ ಬ್ಯಾಗ್ ಬಳಸಿ.ನಮಗೆ ಸಹಕರಿಸಿ ಎಂದು ಮನವಿ ಮಾಡಿದರು.