ಮೈಸೂರು:1 ಜುಲೈ 2022
ನಂದಿನಿ ಮೈಸೂರು
ಉಚ್ಚನ್ಯಾಯಾಲಯದ ಏಕ ಸದಸ್ಯ ಪೀಠ ನಮ್ಮ ಕರ್ನಾಟಕದಲ್ಲಿ ಎಸಿಬಿಯನ್ನ ತರಾಟೆಗೆ ತೆಗೆದುಕೊಂಡಿದೆ.ನಿಮ್ಮದೊಂದು ಕಲೆಕ್ಷನ್ ಪಾಯಿಂಟ್ ಅಂತ ಹೇಳಿದೆ ಈ ಕುರಿತು ಗೋಪಾಲಕೃಷ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು ರಾಜ್ಯ ಸರ್ಕಾರ ಕಾರ್ಯಾಂಗ ಕೆಲಸ ಮಾಡುತ್ತಿದೆ.ದಯವಿಟ್ಟು ಮುಖ್ಯಸ್ಥರು ಹೈಕೋರ್ಟಿಗೊಂದು ಅಪೀಲು ಮಾಡಬೇಕು.ನಮ್ಮ ಪೋಲಿಸರ ಆತ್ಮ ಸ್ಥೈರ್ಯ ಕಡಿಮೆ ಆಗುತ್ತದೆ.ಪೋಲಿಸರ ಸ್ವಾಭಿಮಾನಕ್ಕೆ ದಕ್ಕೆ ಬರುತ್ತೆ ಆದ್ದರಿಂದ ಕ್ಷಮಾಪಣೆ ಕೇಳಬೇಕು.ಹೈಕೋರ್ಟ್ ಹೇಳಿದೆ ಅಂದರೆ ನಿಮ್ಮ ಕಾರ್ಯಾಂಗ ಏನು ಕೆಲಸ ಮಾಡುತ್ತಿದೆ ಎನ್ನುವುದನ್ನ ಗಮನಕ್ಕೆ ತೆಗೆದುಕೊಳ್ಳಿ.ಭ್ರಷ್ಟಾಚಾರಗಳು ಅಂತ ಸಾಬೀತಾಯ್ತು ಅಲ್ಲವೇ.ಒಳ್ಳೆಯ ಪೋಲಿಸರ ಆತ್ಮ ಸ್ಥೈರ್ಯ ಕಡಿಮೆ ಆಗಬಾರದು ಎನ್ನುವುದಾದರೇ ತಕ್ಷಣ ನೀವು ಉಚ್ಚನ್ಯಾಯಾಲಯಕ್ಕೆ ಅಫೀಡೇವೇಟ್ ಹಾಕಿ.ನಮ್ಮಿಂದ ತಪ್ಪು ಆಗಿದೆ ಅಂತ ಕೇಳಿಕೊಳ್ಳಿ.ಭ್ರಷ್ಟಾಚಾರ ಕಡಿಮೆ ಮಾಡೋದನ್ನ ಸರ್ಕಾರ ಮಾಡಬೇಕು ಎಂದರು.