ನಂದಿನಿ ಮೈಸೂರು
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು ವತಿಯಿಂದ ” ವಿಶ್ವ ಪರಿಸರ ದಿನಾಚರಣೆ” ಯನ್ನು ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಚರಿಸಲಾಯಿತು.
ಕಾರ್ಯಕ್ರಮವನ್ನು ಅತಿಥಿಗಳು ಗಿಡಕ್ಕೆ ನೀರು ಹಾಕುವ ಮುಖಾಂತರ ಉದ್ಘಾಟನೆ ಮಾಡಿದರು. ಶ್ರೀಮತಿ ಸರಸ್ವತಿ ನಿರ್ದೇಶಕರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಇವರು ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡುತ್ತಾ ಪ್ರಸ್ತುತ ದಿನಮಾನಗಳಲ್ಲಿ ಮಾನವನ ಅತಿಯಾದ ಆಸೆಯಿಂದ ಪರಿಸರ ನಾಶ ಆಗುತ್ತಿದ್ದು ಇದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ ಅವಮಾನದ ವೈಪರಿತ್ಯ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಇಂದಿನಿಂದಲೇ ಪರಿಸರ ಸಂರಕ್ಷಣೆಯಲ್ಲಿ ಜಾಗೃತಗೊಳದಿದ್ದಲ್ಲಿ ಮುಂದಿನ ಪೀಳಿಗೆಯನ್ನು ನಾವೇ ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ ಈ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಜಗನ್ನಾಥ ಇಂಜಿನಿಯರ್, ಇಸ್ರೋ ಮಾತನಾಡುತ್ತಾ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಘನ ತ್ಯಾಜ್ಯ ವಿಲೇವಾರಿ ಯನ್ನು ಸೂಕ್ತ ಸ್ಥಳಗಳಲ್ಲಿ ಮಾಡಬೇಕು ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಬಳಸುವುದನ್ನು ನಿಲ್ಲಿಸಬೇಕು. ಬಯೋಗ್ಯಾಸನ್ನು ಹೆಚ್ಚು ಉಪಯೋಗಿಸಬೇಕು ನಿಮ್ಮಿಂದಲೇ ಪರಿಸರ ಉಳಿಸುವ ಕಾರ್ಯಗಳು ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ
ಶ್ರೀ. ಪ್ರೊಫೆಸರ್ ಜೋಸ್ ವಿ. ಕೆ ಕಾರ್ಯದರ್ಶಿಗಳು, ಶ್ರೀ ಜೈ ಕೀರ್ತಿ ಪೊಲೀಸ ಸಬ್ ಇನ್ಸ್ಪೆಕ್ಟರ್ ದೇವರಾಜ ಪೊಲೀಸ್ ಠಾಣೆ ಮೈಸೂರು ಮತ್ತು ನೂರಕ್ಕೂ ಹೆಚ್ಚು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪರಿಸರ ಸಂರಕ್ಷಣೆ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಕರಪತ್ರ ಹಂಚುವ ಮುಖಾಂತರ ಜಾಗೃತೆಯನ್ನು ಮೂಡಿಸುತ್ತಾ ಜಾತಾದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಹೋಗಲಾಯಿತು. ನಂತರ ಯುವ ಪ್ರತಿನಿಧಿಗಳು ಪರಿಸರ ಸಂರಕ್ಷಣೆಯ ಬೇಡಿಕೆಗಳನ್ನು ಮಾನ್ಯ ಸಹಾಯಕ ಜಿಲ್ಲಾಧಿಕಾರಿಗಳಿಗೆ ನೀಡಿದರು, ಸಹಾಯಕ ಜಿಲ್ಲಾಧಿಕಾರಿಗಳು ಮಾತನಾಡಿ ಪರಿಸರ ಸಂರಕ್ಷಣೆಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿರುವುದು ತುಂಬಾ ಉಪಯುಕ್ತವಾಗಿದ್ದು ಮುಂದಿನ ದಿನದಲ್ಲಿ ಪರಿಸರ ಸಂರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗೂ ನೀವು ನೀಡಿರುವ ಬೇಡಿಕೆಗಳನ್ನು ಚರ್ಚಿಸಿ ತೀರ್ಮಾನಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.