ಪಂಚವಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿಗ ಗೋವಿಂದರಾಜು ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಆಯ್ಕೆ

71 Views

ಪಿರಿಯಾಪಟ್ಟಣ:14 ಜುಲೈ 2022

ಸತೀಶ್ ಆರಾಧ್ಯ / ನಂದಿನಿ ಮೈಸೂರು

ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿಗ ಗೋವಿಂದರಾಜು ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಆಯ್ಕೆಯಾದರು.

ಕಾಂಗ್ರೆಸ್ ಪಕ್ಷದ ಆಂತರಿಕ ಒಪ್ಪಂದದಂತೆ ಈ ಹಿಂದೆ ಅಧ್ಯಕ್ಷರಾಗಿದ್ದ ನುಸರತ್ ಬಾನು ಉಪಾಧ್ಯಕ್ಷ ರವಿ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿಗ ಗೋವಿಂದರಾಜು ಹಾಗೂ ಜೆಡಿಎಸ್ ಬೆಂಬಲಿಗ ಕಾಳೇಗೌಡ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿಗ ಸುಬ್ರಹ್ಮಣ್ಯ ಜೆಡಿಎಸ್ ಬೆಂಬಲಿಗ ಮಧುರಾಜ್ ನಾಮಪತ್ರ ಸಲ್ಲಿಸಿದರು, ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರಾದ ಗೋವಿಂದರಾಜು ಹಾಗೂ ಸುಬ್ರಹ್ಮಣ್ಯ ತಲಾ 12 ಮತ ಪಡೆದು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಜೆಡಿಎಸ್ ಬೆಂಬಲಿಗರಾದ  ಕಾಳೇಗೌಡ ಹಾಗೂ ಮಧುರಾಜ್ ತಲಾ 9 ಮತ ಪಡೆದು ಪರಾಭವಗೊಂಡರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಂಭ್ರಮಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ ಸ್ವಾಮಿ ಅವರು ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಕೆ.ವೆಂಕಟೇಶ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗುವಂತೆ ಕೋರಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಕೋರಿದರು.

ಯುವ ಮುಖಂಡ ಪಂಚವಳ್ಳಿ ಲೋಹಿತ್ ಅವರು ಮಾತನಾಡಿ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಹೆಚ್ಚು ಜಯಗಳಿಸುತ್ತಿರುವುದು ಮುಂಬರುವ ವಿಧಾನಸಭಾ ಚುನಾವಣೆ ದಿಕ್ಸೂಚಿಯಾಗಿದ್ದು ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕೋರಿದರು.

ಈ ಸಂದರ್ಭ ಮುಖಂಡರಾದ ಲೋಕೇಶ್, ಕುಮಾರ್, ನಜೀರ್, ವೆಂಕಟೇಶ್, ತ್ಯಾಗರಾಜ್, ಮಹದೇವ್, ರಫೀಕ್ ಅಹ್ಮದ್, ಕಾಂಗ್ರೆಸ್ ಬೆಂಬಲಿಗ ಗ್ರಾ.ಪಂ ಸದಸ್ಯರಾದ ಶಫಿಯ ಬೇಗಂ, ಮಹದೇವ್, ರೂಪಶ್ರೀ, ಕಮಲ, ಪೂರ್ಣಿಮಾ, ಮೇಘ, ಜ್ಯೋತಿ, ಸುನಂದಾ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.   

Leave a Reply

Your email address will not be published.