ಪೆಟ್ರೋಲ್ ಟ್ಯಾಂಕ್ ಕವರ್‌ನಲ್ಲಿ ಇಟ್ಟಿದ್ದ 4 ಲಕ್ಷ ರೂ ಹಣ ಕಳ್ಳತನ

ಪಿರಿಯಾಪಟ್ಟಣ:14 ಜುಲೈ 2022

ಸತೀಶ್ ಆರಾಧ್ಯ /ನಂದಿನಿ ಮೈಸೂರು

ಪಿರಿಯಾಪಟ್ಟಣದ ಬಿ.ಎಂ ಮುಖ್ಯ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಹಾಡುಹಗಲೇ ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಕವರ್‌ನಲ್ಲಿ ಇಟ್ಟಿದ್ದ 4 ಲಕ್ಷ ರೂ ಹಣ ಕಳ್ಳತನವಾದ ಘಟನೆ ಜರುಗಿದೆ.

ಪಟ್ಟಣದ ಸೌದೆ ಮತ್ತು ಮನೆ ನಿರ್ಮಾಣ ಸಾಮಗ್ರಿಗಳ ವ್ಯಾಪಾರಿ ಪರಮೇಶ್ ಹಣ ಕಳೆದುಕೊಂಡವರು, ಗುರುವಾರ ಮಧ್ಯಾಹ್ನ ಪಟ್ಟಣದ ಕೆ.ಆರ್ ಫೈನಾನ್ಸ್‌ ಮಾಲೀಕ ಕೆ.ರಮೇಶ್ ಎಂಬುವವರಿಂದ ವ್ಯಾಪಾರದ ಉದ್ದೇಶಕ್ಕಾಗಿ 4 ಲಕ್ಷ ರೂ ಸಾಲ ಪಡೆದು ತಮ್ಮ ಫ್ಯಾಷನ್ ಪ್ರೋ ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ‌ಕವರ್‌ನಲ್ಲಿ ಇಟ್ಟುಕೊಂಡು ಬಿ.ಎಂ ರಸ್ತೆಯಲ್ಲಿರುವ ತುಳಸಿ ಜ್ಯುವೆಲರಿ ಮಾಲೀಕರಿಗೆ ತಮ್ಮ ಜೇಬಿನಲ್ಲಿದ್ದ 50 ಸಾವಿರ ರೂ ಹಣ ನೀಡಿ ಹಿಂದಿರುಗಿದ ವೇಳೆಯಲ್ಲಿ ಕಳ್ಳರು ಬೈಕ್‌ನಲ್ಲಿ ಇಟ್ಟಿದ್ದ 4 ಲಕ್ಷ ರೂ ಹಣ ಎಗರಿಸಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಪರಮೇಶ್ ಅವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಇನ್ಸ್‌ಪೆಕ್ಟರ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರೆಸಿದ್ದಾರೆ. 

Leave a Reply

Your email address will not be published. Required fields are marked *