ಟಿಬೇಟ್ ಕ್ಯಾಂಪಿನಲ್ಲಿ ನಿಂತಿದ್ದ ಕಾರು ಜಖಂಗೊಳಿಸಿದ ಸಲಗ

 

ವಿರನಹೊಸಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಲಗವೊಂದು ಟಿಬೇಟ್ ಕ್ಯಾಂಪಿನಲ್ಲಿ ಮನೆ ಮುಂದೆ ನಿಂತಿದ್ದ ಕಾರಿಗೆ ಗುದ್ದಿ ಜಖಂಗೊಳಿಸಿದೆ ಆಚೆ ದಾಟಿ ನಾಗಪುರ ಆರನೇ ಘಟಕದ ಹತ್ತಿರ ಹಾಡಿಗೆ ನುಗ್ಗಿ ದಾಂಧಲೆ ಮಾಡಿದೆ. ತಕ್ಷಣ ಹಾಡಿಯ ಜನರು ಕಿರುಚಾಡಿ ಸಲಗವನ್ನು ಆಚೆ ದಾಟಿಸಲು ಯಶಸ್ವಿಯಾದರು.

ಅಲ್ಲಿಂದ ಬೆಳಿಗ್ಗೆ 8 ಘಂಟೆ ಸಮಯದಲ್ಲಿ ಹೆಚ್ಚು ಮಳೆ ಆದ್ದರಿಂದ ನಾಗರಹೊಳೆ ರಸ್ತೆಯಲ್ಲಿ ವಾಹನಗಳ ಹೊಡಾಟ ವಿರಳವಾಗಿದ್ದುರಿಂದ ರಸ್ತೆಯಲ್ಲಿ ಹೊಗಿ ಹಲವು ಜಮೀನಿನಲ್ಲಿ ಶುಂಠಿ ಕುಂಬಳ ಬೆಳೆಗಳನ್ನು ತುಳಿದು ನಾಶಪಡಿಸಿ ನಂತರ ಜನರ ಕಿರುಚಾಟಕ್ಕೆ ಟಿಬೇಟ್ ಕ್ಯಾಂಪಿನ ಮನೆಯ ಮುಂದೆ ಕಾಂಪೌಂಡ್ ಬೀಳಿಸಿದೆ .

ಎರಡು ದಿನಗಳ ಹಿಂದಷ್ಟೇ ಇದೇ ಸಲಗ ಟಿಬೆಟ್ ಕ್ಯಾಂಪ್ ನಲ್ಲಿ ದಾಂದಲೆ ಮಾಡಿದೆ ಮತ್ತೆ ಅದೇ ಚಾಳಿ ಮುಂದುವರಿಸಿದೆ ಆದ್ದರಿಂದ ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಸಲಗವನ್ನು ದೂರಕ್ಕೆ ಓಡಿಸಬೇಕು ಇಲ್ಲಾ ಅಂದರೆ ಆನೆಯನ್ನು ಹಿಡಿಯುವ ಕೆಲಸವಾಗಬೇಕು. ಇಲ್ಲವಾದಲ್ಲಿ ಇನ್ನೇರಡು ದಿನದಲ್ಲಿ ವೀರನಹೊಸಹಳ್ಳಿ ವಲಯ ಅರಣ್ಯ ಅಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಬೇಕಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಮುದಗನೂರು ಸುಭಾಷ್ ಒತ್ತಾಯಿಸಿದ್ದಾಾರೆ.

Leave a Reply

Your email address will not be published. Required fields are marked *