ಮತ್ತೆ ಕಾಡಾನೆಗಳ ಹಾವಳಿ, ಭತ್ತ, ರಾಗಿ, ಮುಸುಕಿನಜೋಳ ಬೆಳೆ ನಾಶ

ಹನಗೋಡು:

ನಾಗರಹೊಳೆ ಉದ್ಯಾನದಂಚಿನ ಗ್ರಾಮದಲ್ಲಿ ಮತ್ತೆ  ಕಾಡಾನೆಗಳ ಹಾವಳಿ ಮುಂದುವರೆದಿದ್ದು ಭತ್ತ, ರಾಗಿ, ಮುಸುಕಿನಜೋಳ ಬೆಳೆಗಳನ್ನು ತಿಂದು ತುಳಿದು ನಾಶಪಡಿಸಿವೆ.

ಹನಗೋಡು ಹೋಬಳಿಯ ವೀರನಹೊಸಹಳ್ಳಿ ವಲಯ ವ್ಯಾಪ್ತಿಯ ಕೊಳುವಿಗೆ  ಗ್ರಾಮದ ಆದಿವಾಸಿ ಹಾಡಿಯ ಗಣೇಶರವರಿಗೆ ಸೇರಿದ  ಭತ್ತ ಹಾಗೂ ರಾಗಿ ಬೆಳೆ ಹಾಗೂ ಕೊಳುವಿಗೆ ಹಾಡಿಯ ರಾಜು ರವರಿಗೆ ಸೇರಿದ ಮುಸುಕಿನಜೋಳ ಬೆಳೆಯನ್ನು ರಾತ್ರಿ ಕಾಡಾನೆಗಳ ಹಿಂಡು ದಾಳಿಯಿಟ್ಟು  ತಿಂದು ತುಳಿದ ನಾಶ ಪಡಿಸಿವೆ. 

ಸ್ಥಳಕ್ಕೆ  ವೀರನಹೊಸಹಳ್ಳಿ  ವಲಯದ ಡಿ ಆರ್ ಎಫ್ ಒ ಚಂದ್ರೇಶ್  ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರ್ ನಡೆಸಿದ್ದಾರೆ.
ಈ ಭಾಗದಲ್ಲಿ ಸಂಜೆಯಾಯಿತೆಂದರೆ ಒಂದಲ್ಲ ಒಂದು ಕಡೆ  ರೈಲ್ವೆ ಬೇಲಿ ಹಾಗೂ ಆನೆ ಕಂದಕವನ್ನು ದಾಟಿ ಬರುವ ಈ ಕಾಡಾನೆಗಳು  ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡಾನೆಗಳು ದಾಳಿ ಇಟ್ಟು ನಾಶಪಡಿಸುತ್ತಿರುವುದರಿಂದ  ರೈತರ ಗೋಳು ಹೇಳತೀರದಾಗಿದೆ.

ರಾತ್ರಿ ಕಾವಲಿಲ್ಲ:
ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಸಾಕಷ್ಟು ಅನಾಹುತ ಮಾಡುತ್ತಿದೆ. ಇತ್ತೀಚೆಗೆ ಅರಣ್ಯ ಇಲಾಖೆ ಹಾಗೂ ಗ್ರಾ.ಪಂ.ವತಿಯಿAದ ನರೇಗಾ ಯೋಜನಡಿ  ರಾತ್ರಿ ಕಾವಲು ಕಾಯುತ್ತಿಲ್ಲ, ಅರಣ್ಯ ಇಲಾಖೆಯಲ್ಲಿ ಬೆರಳೆಣಿಕೆ ಸಿಬ್ಬಂದಿಗಳಿದ್ದು ಕಾಡಾನೆ ಹಾವಳಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ, ಇದಲ್ಲದೆ  ಅರಣ್ಯ ಇಲಾಖೆವತಿಯಿಂದ ನಿರ್ಮೀಸುತ್ತಿರುವ ರೈಲ್ವೆ ಕಂಬಿ ಬೇಲಿಯೊಳಗೆ ನುಗ್ಗಿ ಬರುತ್ತಿದೆ. ಇದಲ್ಲದೆ ಬೇಲಿ ನಿರ್ಮಾಣ ಕಾರ್ಯವು ಸಹ ಮಂದಗತಿಯಲ್ಲಿ ಸಾಗುತ್ತಿರುವುದರಿಂದ  ಕಾಡಾನೆಗಳು ಸಲೀಸಾಗಿ ನಾಡು ಪ್ರವೇಶಿಸುತ್ತಿವೆ ಎಂದು ನೊಂದ ಆದಿವಾಸಿ ರೈತ ಗಣೇಶ್   ಆರೋಪಿಸಿದ್ದಾರೆ. ಇದಲ್ಲದೆ ಇಲಾಖೆಯಿಂದ ಪರಿಹಾರ ಹಣಕ್ಕೆ ಅರ್ಜಿ ಹಾಕಲು ಪಹಣಿ ಸೇರಿದಂತೆ ಇತರೆ ದಾಖಲಾತಿಗಳು ನಮ್ಮ ತಾತ ಹೆಜ್ಜೂರಯ್ಯನ ಹೆಸರಿನಲ್ಲಿರುವುದರಿಂದ  ಪರಿಹಾರವು ಕೂಡ ಸಿಗುವುದಿಲ್ಲವೆಂದು  ಪತ್ರಿಕೆಯೊಂದಿಗೆ ನೋವು ತೋಡಿಕೊಂಡರು.

Leave a Reply

Your email address will not be published. Required fields are marked *