ಕಾವೇರಿ ಗುಣಶೀಲಾ ಐವಿಎಫ್ ಸೆಂಟರ್ ಲೋಕಾರ್ಪಣೆಗೊಳಿಸಿದ ನಟಿ ಸುಹಾಸಿನಿ

45 Views

ಮೈಸೂರು:15 ನವೆಂಬರ್ 2021

ನಂದಿನಿ

ಮಕ್ಕಳ ಎಂದರೆ ಸಂತೋಷದ ಸಂಕೇತ.ಸಾಮಾಜಿಕ ಕಳಂಕವಾಗಿ ಬಂಜೆತನ ಎಂಬುದು ಕಾಣುತ್ತದೆ. ಒಂದು ವಿಶೇಷ ಕೋಣೆಯಲ್ಲಿ ಹೊಸ ಜೀವವನ್ನು ಸೃಷ್ಟಿ ಮಾಡುತ್ತಾರೆ ಎಂಬುದನ್ನು ನೋಡಿದಾಗ ಬಹಳ ಖುಷಿಯಾಯಿತು.ದಂಪತಿಗಳು ಇದನ್ನ ಸದುಪಯೋಗಪಡಿಸಿಕೊಳ್ಳಿ ಎಂದು ಹಿರಿಯ ನಟಿ ಸುಹಾಸಿನಿ ಮಣಿರತ್ನಂ ತಿಳಿಸಿದರು.

ಮೈಸೂರಿನಲ್ಲಿರುವ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಕಾವೇರಿ ಗುಣಶೀಲಾ ಐವಿಎಫ್ ವಿನೂತನ ಸೆಂಟರ್ ಅನ್ನು ಟೇಪ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ಮೈಸೂರು ಎಂದರೆ ನೂರೊಂದು ನೆನಪುಗಳು ಬರುತ್ತವೆ. ಕನ್ನಡದಲ್ಲಿ ಮೊದಲ ಬಂಧನ ಸಿನಿಮಾದ ಮೊದಲ ಶೂಟಿಂಗ್ ಇಲ್ಲಿಯೇ ಆಯಿತು. ಮೈಸೂರಿಗೆ ಬರುವುದೆಂದರೆ ಖುಷಿ ಅನೇಕ ನೆನಪುಗಳು ಇಲ್ಲಿಗೆ ಬರುತ್ತವೆ. ಇಲ್ಲಿ ಓಡಾಡುವುದೇ ಖುಷಿ ವಿಚಾರ. ನಾನು ಮೆಡಿಕಲ್ ಪ್ರೊಫೆಷನರ್ ಹಾಗಿಯೇ ಚಲನಚಿತ್ರದಲ್ಲಿ ಅಭಿನಯಿಸಿದ್ದೇನೆ.ಆದರೇ ನಾನು ವೈದ್ಯಕೀಯ ವಿದ್ಯಾಭ್ಯಾಸ ಮಾಡಿಲ್ಲ.ಸಿಟಿಯಲ್ಲಿ ಓದಿ ಸಾಧನೆ ಮಾಡೋದು ಸಹಜ .ಆದರೇ ಕಡು ಬಡತನ,ಗ್ರಾಮಾಂತರ ಪ್ರದೇಶದಲ್ಲಿ ಮಧ್ಯಾಹ್ನದ ಊಟ ಸೇವನೆ ಮಾಡಿ ವಿದ್ಯಾಭ್ಯಾಸ ಮಾಡಿದ್ದೇನೆ. .ನನ್ನ ಕುಟುಂಬದಲ್ಲಿ 40 ಜನ ವಕೀಲರಿದ್ದಾರೆ.ಆದರೇ ನಾನು ಕಲಾವಿದೆಯಾಗಿ ಈ ಹಂತ ತಲುಪಿದ್ದೇನೆ.ಬಂಧನ ಚಿತ್ರದ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ಎಂದು ಹಾಡುವ ಮೂಲಕ ನೆರೆದಿದ್ದವರನ್ನ ರಂಜಿಸಿದರು.

ನಂತರ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಛೇರ್ಮನ್ ಡಾ.ಚಂದ್ರಶೇಖರ್ ಮಾತನಾಡಿ, ಕಾವೇರಿ ಆಸ್ಪತ್ರೆ ೧೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಗುಣಶೀಲ ಐವಿಎಸ್ ಸೆಂಟರ್ ಕಾವೇರಿ ಗ್ರೂಪ್ ನೊಂದಿಗೆ ಸೇರಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗುಣ ಶೀಲ ಆಸ್ಪತ್ರೆಯ
ಡಾ. ರಾಜಶೇಖರ್ ನಾಯಕ್,ದೇವಿಕ ಗುಣಶೀಲ,ನಳಿನಿ ಸೇರಿದಂತೆ ಆಸ್ಪತ್ರೆ ವೈದ್ಯರು,ಸಿಬ್ಬಂದಿಗಳು ಭಾಗಿಯಾಗಿದ್ದರು.

Leave a Reply

Your email address will not be published.