ಅಕ್ರಮ ಮಧ್ಯೆ ಮಾರಾಟ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ದ ಕೆಆರ್ ನಗರ ಪೋಲಿಸ್ ಠಾಣೆಯಲ್ಲಿ ದೂರು

ಅಕ್ರಮ ಮಧ್ಯೆ ಮಾರಾಟ  ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ದ ಕೆಆರ್ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹುಣಸೂರು ಉಪ ವಿಭಾಗದ ಉಪ ಅಧೀಕ್ಷಕರು ಕೆ ಟಿ ವಿಜಯ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಕೆ ಆರ್ ನಗರ ವಲಯ ನಿರೀಕ್ಷಕರಾದ ಎಸ್ಎಂ ಶೈಲಜಾ ವಿಜಯ್ ಕುಮಾರ್ ಹಾಗೂ ಅಬಕಾರಿ ಕಾನ್ಸ್ಟೇಬಲ್ ಶಿವಪ್ಪ ಬಾನುಸಿ. ಪುಟ್ಟಸ್ವಾಮಿಗೌಡ. ರಾಜೇಶ್ ಟಿ ಎಸ್ ವಾಹನ ಚಾಲಕರು. ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೆ ಆರ್ ನಗರ ತಾಲೂಕು ಹೊಸ ಅಗ್ರಹಾರ ಮಾರಗೌಡನಹಳ್ಳಿ ಗ್ರಾಮದಲ್ಲಿ ಬೋರಯ್ಯ ರವರ ಮನೆಯ ಮೇಲೆ ಪರಿಶೀಲನೆ ಮಾಡಿದಾಗ ಬಿಯರ್ ತುಂಬಿದ ರಟ್ಟಿನ ಬಾಕ್ಸ್ ಗಳು ಹಾಗೂ ಮನೆ ಹಿಂಬಾಗದಲ್ಲಿ ಇದ್ದ ಸೂರಿನ ಕೆಳಗೆ 3 ಬಾಕ್ಸ್ ಮಧ್ಯದೋರ್ಕಿದ್ದು. ಆತನನ್ನು ಬಂಧಿಸಲು ಮುಂದಾದಾಗ ಬೋರಯ್ಯ ಮತ್ತು ಮೂರು ಜನ ಸಹಚರರು ಅಬಕಾರಿ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರ ಮೇಲೆ ಹೇಳೆದು ತಳ್ಳಿ ಮಾಡಿ ಬೋರಯ್ಯ ನಿಗೆ ಓಡಿ ಹೋಗಲು ಸಹಕಾರ ನೀಡಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಾರೆ. ಆದ್ದರಿಂದ ಅಬಕಾರಿ ಇಲಾಖೆ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ ಹಾಗೂ ಬೋರಯ್ಯನಿಗೆ ಓಡಿ ಹೋಗಲು ಸಹಕಾರ ನೀಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ರವಿ ಬಿನ್ ಗವಿರಾಜಯ್ಯ ಮಾದೇವ ಬಿನ್ ತಮ್ಮಯ್ಯ ರಾಜೇಶ ಬಿನ್ ತಮ್ಮಯ್ಯ ಇವರುಗಳ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಅಬಕಾರಿ ಉಪ ನಿರೀಕ್ಷಕರಾದ ವಿಜಯಕುಮಾರ್ ತಮ್ಮ ಖಾಸಗೀ ಮೊಬೈಲ್ ನಲ್ಲಿ  ವಿಡಿಯೋ ಚಿತ್ರೀಕರಣಗೊಂಡಿದೆ‌.

 

 

Leave a Reply

Your email address will not be published. Required fields are marked *