ಗ್ರಾಮಗಳ ಅಭಿವೃದ್ಧಿಗೆ ಎನ್‌.ಎಸ್.ಎಸ್‌. ಶಿಬಿರಗಳ ಪಾತ್ರ ಬಹಳ ಮುಖ್ಯ ಗ್ರಾಮ ಅಧ್ಯಕ್ಷ ಅಂಬಿ ಮಾದಪ್ಪ

ಸುತ್ತೂರು ನಂಜುಂಡನಾಯಕ/ನಂದಿನಿ ಮೈಸೂರು

ಗ್ರಾಮಗಳ ಅಭಿವೃದ್ಧಿಗೆ ಎನ್‌.ಎಸ್.ಎಸ್‌. ಶಿಬಿರಗಳ ಪಾತ್ರ ಬಹಳ ಮುಖ್ಯ ಗ್ರಾಮ ಅಧ್ಯಕ್ಷ ಅಂಬಿ ಮಾದಪ್ಪ

ಸುತ್ತೂರು:ನಂಜನಗೂಡು ತಾಲ್ಲೂಕು ಸುತ್ತೂರು ಗ್ರಾಮದಲ್ಲಿ ಜೆ.ಎಸ್.ಎಸ್‌. ಪಾಲಿಟೆಕ್ನಿಕ್‌ ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರವನ್ನು ಗ್ರಾಪಂ ಅಧ್ಯಕ್ಷ ಅಂಬಿಕಾಮಾದಪ್ಪ, ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದರ ಮೂಲಕ ಜನರು ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳಲು ತಿಳಿಸಿದರಲ್ಲದೇ ಈ ನಿಟ್ಟಿನಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೈಸೂರಿನ ಜೆ.ಎಸ್.ಎಸ್.ವಿಕಲಚೇತನರ ಪಾಲಿಟೆಕ್ನಿಕ್ ವತಿಯಿಂದ ನಮ್ಮ ಗ್ರಾಮದಲ್ಲಿ ಎನ್.ಎಸ್‌.ಎಸ್., ಶಿಬಿರವನ್ನು ಹಮ್ಮಿಕೊಂಡಿರುವುದು ಸಂತಸ ತಂದಿದ್ದು, ಈ ಶಿಬಿರದಲ್ಲಿ ಸ್ವಚ್ಛತೆಯನ್ನು ವಿಕಲಚೇತನರೇ ಮಾಡುತ್ತಿರುವುದು ಕಾಯಕದಲ್ಲಿ ಅವರಿಗಿರುವ ಶ್ರದ್ದೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಜೆ.ಎಸ್.ಎಸ್. ವಿಕಲಚೇತನರ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಬಿ.ಇಳಂಗೋವನ್‌ರವರು ಮಾತನಾಡಿ ಈ ಶಿಬಿರದಲ್ಲಿ ನಮ್ಮ ಕಾಲೇಜಿನಿಂದ ಸುಮಾರು 120 ವಿಕಲಚೇತನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈ ಶಿಬಿರದಲ್ಲಿ ಸುತ್ತಲಿನ ಪರಿಸರ ಹಾಗೂ ಸ್ವಚ್ಛತೆಯ ಬಗ್ಗೆ, ಗ್ರಾಮ ಮತ್ತು ಸುತ್ತಲಿನ ಜನತೆಗೆ ಪರಿಸರ ಕಾಳಜಿಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳ ಮುಖ್ಯಸ್ಥರುಗಳಾದ ಬಿ.ಶ್ರೀನಿವಾಸ್‌, ಎಂ.ಜಿ.ನಯನ, ಬಿ.ಸುನಿತ, ಸಿ.ಪಿ.ರಘು, ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ, ಗ್ರಾಪಂ ಕಾರ್ಯದರ್ಶಿ ಮರೇಗೌಡ, ಸಿಬ್ಬಂದಿ ಶಿವಣ್ಣ, ಹಾಗು ವಿಕಲಚೇತನ ಶಿಬಿರಾರ್ಥಿಗಳು, ಗ್ರಾಮಸ್ಥರುಗಳು, ಗ್ರಾಮದ ಮುಖಂಡರುಗಳು, ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *