ಅರುಂಧತಿ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆಂಚಯ್ಯ, ಉಪಾಧ್ಯಕ್ಷರಾಗಿ ಎನ್.ಸಿ.ಲಕ್ಷ್ಮಿ‌ ಅವಿರೋಧ ಆಯ್ಕೆ

ಮಾಧು / ನಂದಿನಿ ಮೈಸೂರು

ತಿ.ನರಸೀಪುರ ಪಟ್ಟಣದ ತ್ರಿವೇಣಿ ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಅರುಂಧತಿ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆಂಚಯ್ಯ ಹಾಗು ಉಪಾಧ್ಯಕ್ಷರಾಗಿ ಎನ್.ಸಿ.ಲಕ್ಷ್ಮಿ‌
ಅವಿರೋಧವಾಗಿ ಆಯ್ಕೆಗೊಂಡರು.

ತಿ.ನರಸೀಪುರ ಪಟ್ಟಣದ ತ್ರಿವೇಣಿ ನಗರದಲ್ಲಿ 15 ಮಂದಿ ಸದಸ್ಯ ಬಲವಿರುವ ಸಹಕಾರ ಸಂಘವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಬುಧವಾರ ಚುನಾವಣೆ ನಿಗದಿ ಮಾಡಲಾಗಿತ್ತು.
ಮುಂದಿನ 5 ವರ್ಷಗಳ ಕಾಲದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಸಾಮಾನ್ಯ ಕ್ಷೇತ್ರದಿಂದ ಕೆ.ಕೆಂಚಯ್ಯ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲು ಕ್ಷೇತ್ರದಿಂದ ಎನ್.ಸಿ.ಲಕ್ಷ್ಮಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅರುಂಧತಿ ಸಹಕಾರ ಸಂಘದ ರಿಟರ್ನಿಂಗ್ ಆಫೀಸರ್ ಜೆ.ರಮೇಶ್ ಇವರಿಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಸಂಘದ ಒಟ್ಟು 15 ಆಡಳಿತ ಮಂಡಳಿಯ ಸದಸ್ಯರ ಪೈಕಿ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಸೇರಿದಂತೆ ಬಿ.ಮಂಜುನಾಥ್, ಎಂ.ಮಹದೇವಸ್ವಾಮಿ,ಎಲ್.ಮಂಜುನಾಥ್, ಎಂ.ಎಸ್.ಶಿವಣ್ಣ,ಎಂ.ನವೀನ್ ರಾಜ್,ಬಿ.ಎಸ್.ಸುನೀಲ್ ಕುಮಾರ್,ಟಿ.ನಾಗಣ್ಣ,ಡಿ.ಪ್ರಭುದೇವ್,ಎಸ್.ಮಂಜು,ಎಂ.ಪ್ರಸಾದ್, ಸಿದ್ದಮ್ಮ,ಬಿ.ಎಸ್.ವಸಂತ ಚುನಾವಣೆ ಸಭೆಯಲ್ಲಿ ಹಾಜರಿದ್ದು ಸಹಕಾರ ಸಂಘದ ವರಿಷ್ಠರ ಆಯ್ಕೆಗೆ ಅನುಮೋದನೆ ಸೂಚಿಸಿದರೆ,ನಿರ್ದೇಶಕರಾದ ಟಿ.ಕೆ.ರಜನೀಶ್ ಹಾಗು ಎಂ.ಮಹದೇವಸ್ವಾಮಿ ಗೈರಾದರು.

*ಹೆಚ್ಚು ಷೇರುದಾರರನ್ನು ಕರತನ್ನಿ !*
ನೂತನ‌ ಅಧ್ಯಕ್ಷ ಕೆ.ಕೆಂಚಯ್ಯ ಮಾತನಾಡಿ ಪ್ರಸ್ತುತ ಸಂಘದಲ್ಲಿ 400 ಕ್ಕಿಂತಲೂ ಹೆಚ್ಚು ಮಂದಿ ಷೇರುದಾರರಿದ್ದು,ನಿರ್ದೇಶಕರುಗಳು ಹೆಚ್ಚಿನ ಆಸಕ್ತಿ ವಹಿಸಿ ಪ್ರತಿ ಹಳ್ಳಿಗಳಂದಲೂ ಹೆಚ್ಚಿನ ಸಂಖ್ಯೆಯ ಷೇರುದಾರರನ್ನು ಸಂಘಕ್ಕೆ ನೋಂದಣಿ ಮಾಡಿಸಿದರೆ ಸಂಘ ಮತ್ತಷ್ಟು ಸದೃಡವಾಗಿ ಬೆಳೆಯುತ್ತದೆ,ಹಾಗಾಗಿ ಸಂಘದ ಎಲ್ಲ 15 ಮಂದಿ ಆಡಳಿತ ಮಂಡಳಿ ಸದಸ್ಯರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕು,ಸಂಘವನ್ನು ಮಾದರಿ ಸಂಘ ಮಾಡುವ ಆಶಯ ಹೊಂದಿರುವ ನನಗೆ ಸಹಕಾರ ನೀಡುವಂತೆ ಕೋರಿದರು.ಉಪಾಧ್ಯಕ್ಷೆ ಎನ್.ಸಿ.ಲಕ್ಷ್ಮಿ ಮಾತನಾಡಿ ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಸಂಘದ ಆರ್ಥಿಕ ಬೆಳವಣಿಗೆಗೆ ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *