ಸುತ್ತೂರು ನಂಜುಂಡನಾಯಕ / ನಂದಿನಿ ಮೈಸೂರು
ಇತ್ತೀಚೆಗೆ ಕೊರೋನಾ ನಾಲ್ಕನೇ ಅಲೆ ಭೀತಿ ಕಾಣುತ್ತಿದ್ದು ಎಲ್ಲರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಲ್ಲಿ ಮಾಸ್ಕ್ ಧರಿಸುವಂತೆ ಸರ್ಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಕೊರೋನ ತಡೆಹಿಡಿಯಲು ಶಾಲೆಯ ಎಲ್ಲ ಮಕ್ಕಳು ಮಾಸ್ಕ್ ಧರಿಸಿಕೊಂಡು ಶಾಲೆಗೆ ಆಗಮಿಸಿದರು.ಶಾಲೆಯ ಬಾಗಿಲಿನಲ್ಲಿ ಆಗಮಿಸುತ್ತಿದ್ದ ಎಲ್ಲಾ ಮಕ್ಕಳನ್ನು ಶಾಲಾ ಮುಖ್ಯ ಶಿಕ್ಷಕರಾದ ನಾಗರಾಜು,ಸಹಶಿಕ್ಷಕರು ಮಕ್ಕಳಿಗೆ ಕೈಮುಗಿದು ಶಾಲಾ ಕೊಠಡಿಗೆ ತೆರಳುವಂತೆ ಸ್ವಾಗತಿಸಿದರು.