ನಂಜನಗೂಡು :8 ನವೆಂಬರ್ 2021
ನಂದಿನಿ
2019-2020ಹಾಗೂ 2020-21ಸಾಲಿನ
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ
ಬ್ರಾಹ್ಮಣ ಧರ್ಮ ಸಹಾಯಕ
ಸಭಾ ವತಿಯಿಂದ ಪ್ರತಿಭಾ ಪುರಸ್ಕಾರ ನೆರವೇರಿತು.
ನಂಜನಗೂಡಿನ ಕಾಮಾಕ್ಷಿ ಬಾಯಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಯು ಎನ್ ಪದ್ಮನಾಭರಾವ್ ಚಾಲನೆ ನೀಡಿದರು.
ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಹಾಗೂ ತಲಾ 1ಸಾವಿರ ಗೌರವಧನ ನೀಡಿ ಪುರಸ್ಕರಿಸಲಾಯಿತು.
ನಂತರ ಮಾತನಾಡಿದ ವಿಪ್ರ ಸಮುದಾಯದವರು ಸ್ವ ಅಭಿಮಾನ ಹಾಗೂ ಸಂಕೋಚ ಮನೋಭಾವದಿಂದ ಯಾರ ಬಳಿಯೂ ಸಹಾಯ ಕೇಳಲು ಹಿಂಜರಿಯುತ್ತಾರೆ ಅದಕ್ಕಾಗಿ ನಮ್ಮ ಸಮಾಜದಲ್ಲಿ ಕಡುಬಡವರು ಹಾಗೂ ವಿದ್ಯಾಭ್ಯಾಸಕ್ಕೆ ತೊಂದರೆಗೆ ಒಳಗಾದಂತಹ ಕುಟುಂಬಗಳು ಸಭಾದ ಪದಾಧಿಕಾರಿಗಳ ಗಮನಕ್ಕೆ ತಂದರೆ ನಾವು ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.
ತದನಂತರ ಬ್ರಾಹ್ಮಣ ಧರ್ಮ ಸಹಾಯಕ ಸಬಾ ಹಾಗೂ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಗೋವರ್ಧನ್ ಮಾತನಾಡಿ
ಬ್ರಾಹ್ಮಣ ಸಂಘಕ್ಕೆ ಹೆಚ್ಚು ಹೆಚ್ಚು ಸದಸ್ಯರಾಗುವ ಮೂಲಕ ಸಂಘದ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸುತ್ತಾ
ಶೈಕ್ಷಣಿಕ ವರ್ಷದಿಂದ ನನ್ನ ವೈಯಕ್ತಿಕವಾಗಿ 5 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ಸಾಮಾಜಿಕ ಕಳಕಳಿ ಮೆರೆದರು.
ಹಾಸ್ಯ ಕಲಾವಿದ ಮೈಸೂರಿನ ಆನಂದ್ ಅವರು ಹಾಸ್ಯ ಚಟಾಕಿ ಹಾರಿಸುವ ಮೂಲಕ ಮನರಂಜನೆ ನೀಡಿದರು.
ಸಂಘದ ವತಿಯಿಂದ ವೇದಿಕೆಯ ಮೇಲಿನ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಕಂಠೇಶ್ವರಸ್ವಾಮಿ ದೇವಾಲಯದ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ಸಭಾದ ಮಾಜಿ ಅಧ್ಯಕ್ಷ ಸದಾಶಿವುನಗರಸಭಾ ಸದಸ್ಯ ಕಪಿಲೇಶ್ ಧರ್ಮಾಧಿಕಾರಿ ಶ್ರೀಕಂಠ ಜೋಯಿಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.