ಮೈಸೂರು:7 ನವೆಂಬರ್ 2021
ನಂದಿನಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲಿಗೆ ಇಡೀ ನಾಡಿನ ಜನತೆಗೆ ದಂಗು ಬಡಿಸಿದೆ.
ಅತಿ ಚಿಕ್ಕ ವಯಸ್ಸಿನಲ್ಲೇ ತಂದೆ ಡಾ. ರಾಜ್ ಕುಮಾರ್ ಅವರ ಜೊತೆಗೂಡಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಪ್ಪು, ಸಮಸ್ತ ನಾಡಿನ ಜನರ ಹೃದಯ ಸಿಂಹಾಸನದಲ್ಲಿ ರಾರಾಜಿಸಿ ಮೆರೆಯುತ್ತಿದ್ದರು.
ಕನ್ನಡಿಗರ ಪ್ರೀತಿಯ ಅಪ್ಪು ಈಗ ಎಲ್ಲರಿಂದ ದೂರ ಸರಿದು ಕಣ್ಣೀರಿಡುಂತೆ ಮಾಡಿದ್ದಾರೆ. ಅಪ್ಪು ಅಗಲಿಕೆಯ ಮರೆಮಾಚಲು ಅದೆಷ್ಟೊ ಮಂದಿ ಅವರ ಕಟ್ಟೌಟ್, ಪ್ರತಿಮೆ, ರಂಗೋಲಿ, ಚಿತ್ರಪಟಗಳಲ್ಲಿ ಸೆರೆ ಮಾಡಿ ಅಪ್ಪು ಅಗಲಿಕೆಯನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಕಲಾವಿದ ಪೆನ್ ಸ್ಕೆಚ್ ಮಾಡುವ ಮೂಲಕ ನೆಚ್ಚಿನ ನಾಯಕನ ಅಭಿಮಾನವ ಮೆರೆದಿದ್ದಾರೆ.
ನೀವೀಗ ನೋಡುತ್ತಿರುವ ಅಪ್ಪುವಿನ ಪೆನ್ ಸ್ಕೆಚ್ ಮಾಡಿದ ಕಲಾವಿದನ ಹೆಸರು ಪ್ರಕಾಶ್. ಮೈಸೂರಿನ ಸುದ್ದಿ ಮಾಧ್ಯಮವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ನೆಚ್ಚಿನ ನಾಯಕ ಅಗಲಿಕೆಯಿಂದ ಬಹಳಷ್ಟು ನೊಂದಿದ್ದರು. ಈ ನೋವನ್ನು ಮರೆಮಾಚಲು ಅಪ್ಪು ಅವರ ಭಾವಚಿತ್ರವನ್ನು ಪೆನ್ನಿನಲ್ಲಿ ಚಿತ್ರಿಸುವ ಮೂಲಕ ತಮ್ಮ ಹೃದಯಾಂತರಾಳದ ನೋವು ಹಾಗು ‘ಅಭಿ’ಮಾನವನ್ನು ಹೊರಹಾಕಿದ್ದಾರೆ.