ನಂಜನಗೂಡಿನ ಜೆಎಸ್ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭ

ನಂದಿನಿ‌ ಮೈಸೂರು

ನಂಜನಗೂಡಿನ ಜೆಎಸ್ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ ಎಸ್ ಹೊನ್ನೇಗೌಡ, ಸರಗೂರಿನ ಬಿ ವಟಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂತೋಷ್ ಚೊಕ್ಕಾಡಿ, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಸದಸ್ಯರಾದ ದಿಲೀಪ್ ಕುಮಾರ್ ಎಸ್ ಸಿ ಅವರು ಸಮಾರಂಭಕ್ಕೆ ಚಾಲನೆ ನೀಡಿದರು.

ಸಂತೋಷ್ ಚೊಕ್ಕಾಡಿಯವರು ಮಾತನಾಡಿ ಬೇಂದ್ರೆಯವರ ಕವನವನ್ನು ಉದಾಹರಣೆ ನೀಡಿ ಮನುಷ್ಯನ ಬದುಕು ಕೇವಲ ಗಾಳಿ ಊದುವ ಕೊಳವೆಯಾಗದೆ, ಸುಶ್ರಾವ್ಯ ನಾದ ಹೊಮ್ಮಿಸುವ ಕೊಳಲಾಗಬೇಕು. ಮಾನವೀಯತೆ, ಜನಪದ ಕಲೆ, ಸಾಮಾಜಿಕ ಕಳಕಳಿ, ದೇಶದ ಬಗ್ಗೆ ಹೆಮ್ಮೆ ಇವುಗಳನ್ನು ಮೂಡಿಸುವುದು ಸಾಂಸ್ಕೃತಿಕ ಕಲೆಗಳಿಂದ ಮಾತ್ರ ಎಂದರು.

ನಂತರ ದಿಲೀಪ್ ಕುಮಾರ್ ರವರು ಮಾತನಾಡಿ ಸೋಲೆ ಗೆಲುವಿನ ಮೆಟ್ಟಿಲು, ಪ್ರತಿ ಸೋಲು ಜೀವನದಲ್ಲಿ ಪಾಠ ಕಲಿಸುತ್ತದೆ. ನೋವು ಇಲ್ಲದೆ ಯಾವ ಸಾಧನೆಯು ಸಾಧಿತವಾಗುವುದಿಲ್ಲ ಎಂದು ಯುವಜನರಿಗೆ ಸ್ಪೂರ್ತಿದಾಯಕ ಮಾತುಗಳಾಡಿದರು.


ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ ಎನ್ ಶಿವಕುಮಾರ್ ಕೆ ರವರು ಮಾತನಾಡಿ ಶಿಕ್ಷಣ ನಮ್ಮೊಳಗೆ ಆಂತರಿಕ ಶಕ್ತಿಯನ್ನು ಪ್ರೇರೇಪಿಸುತ್ತದೆ. ಈಗ ಶಿಕ್ಷಣವನ್ನು ಮೊಬೈಲ್ ಮತ್ತು ಹಣ ಈ ಎಂಬ ಎರಡು ವಸ್ತುಗಳು ಆಕ್ರಮಿಸಿದೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದರಿಂದಲೂ ಕೂಡ ನಾವು ವಿಚಾರವನ್ನು ಸಂಗ್ರಹಿಸಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಹೊನ್ನೇಗೌಡರು, ಸತತ ಅಧ್ಯಯನ‌ ಶೀಲರಾಗದೆ ಶಿಕ್ಷಣ ಮತ್ತು ಕ್ರೀಡೆಯ ಸಾಧನೆ ಸಾಧಿತವಾಗುವುದಿಲ್ಲ. ನಾವು ಸಮಯವನ್ನು ವ್ಯರ್ಥ ಮಾಡಿದರೆ ಅದು ನಮ್ಮನ್ನೇ ಕೊಲ್ಲುತ್ತದೆ ಮತ್ತು ನಾವು ಅನುಭವಿಸಿದ ಬಡತನ ಮತ್ತು ಅವಮಾನವೇ ನಮಗೆ ನಿಜವಾದ ಶಿಕ್ಷಕರು. ಅವುಗಳಿಂದಲೇ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.


ನಂತರ ಕಾಲೇಜಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ , ಕ್ರೀಡಾ ಚಟುವಟಿಕೆಗಳಲ್ಲಿ ಮತ್ತು ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಮತ್ತು ಪ್ರಶಸ್ತಿಗಳನ್ನು ನೀಡಲಾಯಿತು.

ಕುಮಾರಿ ನಮಿತಾ ಡಿ ದ್ವಿತೀಯ ಬಿಎಸ್ಸಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿದ್ದು, ತೃತೀಯ ಬಿಕಾಂ ವಿದ್ಯಾರ್ಥಿನಿಯಾದ ಪಾವನ ಎಲ್ಲರನ್ನೂ ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆಯ ವರದಿಯನ್ನು ತೃತೀಯ ಬಿಎ ವಿದ್ಯಾರ್ಥಿನಿಯಾದ ಕು. ಮಂಜುಳಾ ಹಾಗೂ ಕ್ರೀಡಾ ವರದಿಯನ್ನು ಪ್ರಥಮ ಬಿಎ ವಿದ್ಯಾರ್ಥಿನಿಯಾದ ಸ್ಪೂರ್ತಿ ಒಪ್ಪಿಸಿದರು. ನಿರೂಪಣೆಯನ್ನು ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿಯಾದ ರಂಜಿತ ಮತ್ತು ವಂದನಾರ್ಪಣೆಯನ್ನು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಭ್ರಮರಾಂಬಿಕ ನಿರ್ವಹಿಸಿದರು.

ಈ ಸಮಾರಂಭದಲ್ಲಿ ಕಾಲೇಜಿನ ಅಧೀಕ್ಷಕರಾದ ಕೆ ವಿ ಸುಂದರರಾಜು, ಕಾಲೇಜಿನ ದೈಹಿಕ ನಿರ್ದೇಶಕರಾದ ವಿಕ್ರಂ, ಅಧ್ಯಾಪಕರು, ಅಧ್ಯಾಪಕೇತರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *