ನಂದಿನಿ ಮೈಸೂರು
ಮೈಸೂರು ನಗರ ಪಾಲಿಕೆ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕುರುಬ ಸಂಘದ ನಿರ್ದೇಶಕರಾದ ಜೆ ಗೋಪಿ ಅವರ ಹುಟ್ಟು ಹುಟ್ಟಹಬ್ಬ ಪ್ರಯುಕ್ತ ವಿಶೇಷ ತಜ್ಞರುಗಳಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಮೈಸೂರಿನ ಟಿಕೆ ಬಡಾವಣೆಯ ಗಣೇಶ್ ಭಂಡಾರ ವೃತ್ತದಲ್ಲಿ ಜೆ.ಗೋಪಿರವರ ಹುಟ್ಟು ಹಬ್ಬದ ಅಂಗವಾಗಿ ಗೋಪಿರವರ ಸ್ನೇಹಿತರು,ಹಿತೈಷಿಗಳು, ಅಭಿಮಾನಿಗಳು ಒಟ್ಟಾಗಿ ಸೇರಿ ಸುಯೋಗ್ ಆಸ್ಪತ್ರೆ,
ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆ,ಕ್ಲೀಯರ್ ಮೆಡಿರೆಡಿಯಂಟ್ ನಯನ ಕುಮಾರ್ಸ್ ಮಲ್ಟಿಸ್ಪೆಷಲ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜನೆಗೊಂಡಿದ್ದ
ಉಚಿತ ಆರೋಗ್ಯ ಶಿಬಿರಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರವರು ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಜೆ.ಗೋಪಿರವರು ಕೂಡ ಸಾರ್ವಜನಿಕರಂತೆ ಸರತಿ ಸಾಲಿನಲ್ಲಿ ನಿಂತು ಕಣ್ಣಿನ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆದರು.
ಬೆಳಗ್ಗೆಯಿಂದ ಆರಂಭವಾದ ಶಿಬಿರ ಮಧ್ಯಾಹ್ನ 2 ಗಂಟೆಯವರೆಗೂ ನಡೆಯಿತು.ಟಿಕೆ ಬಡಾವಣೆ ಸುತ್ತಾ ಮುತ್ತಲಿನ ಸುಮಾರು 120 ಕ್ಕೂ ಹೆಚ್ಚು ಜನರು ಆಗಮಿಸಿ ಸಾಮಾನ್ಯ ಪರಿಕ್ಷೇ,ಬಿಪಿ,ಶುಗರ್ ಹಾಗೂ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.