ಸೊರಗಿದ ಶ್ರೀನಿವಾಸ್ ಪ್ರಸಾದ್ ರವರ ಕನಸಿನ ಕೂಸು ನಂಜನಗೂಡು ಮಿನಿ ವಿಧಾನಸೌಧ ಅಧಿಕಾರಿಗಳ ಅವ್ಯವಸ್ಥೆ ವಿರುದ್ದ ಜನಾಕ್ರೋಶ

ಸ್ಟೋರಿ:ನಂದಿನಿ ಮೈಸೂರು

*ಸೊರಗಿದ ಶ್ರೀನಿವಾಸ್ ಪ್ರಸಾದ್ ರವರ ಕನಸಿನ ಕೂಸು ನಂಜನಗೂಡು ಮಿನಿ ವಿಧಾನಸೌಧ*

*ಅಧಿಕಾರಿಗಳ ಅವ್ಯವಸ್ಥೆ ವಿರುದ್ದ ಜನಾಕ್ರೋಶ*

ಲಿಫ್ಟ್ ಇದೆ ಬಳಕೆಗೆ ಅವಕಾಶವಿಲ್ಲ. ವಯಸ್ಸಾದ ವೃದ್ಧರು ಮೆಟ್ಟಿಲುಗಳನ್ನು ಅತ್ತಿಳಿಯುವ ಹರಸಾಹಸದಲ್ಲಿ ತೊಡಗಿದ್ರೇ ಇತ್ತ ಸಾರ್ವಜನಿಕರು
ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲದೆ ನಿಂತಲ್ಲೇ ನಿಂತಿದ್ದಾರೆ, ಮಹಿಳೆಯರು,ವೃದ್ದರು ನಿಲ್ಲಲೂ ಆಗದೇ ನೆಲದ ಮೇಲೆ ಕುಳಿತಿದ್ದಾರೆ. ದಾಹವಾದೇ ಕುಡಿಯೋಕೆ ನೀರಿಲ್ಲ, ಗಬ್ಬು ನಾರುತ್ತಿರುವ ಶೌಚಾಲಯ. ಈ ಎಲ್ಲಾ ಚಿತ್ರಣ ಕಂಡುಬಂದಿದ್ದು
ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕನಸಿನ ಕೂಸು ಮಿನಿ ವಿಧಾನಸೌಧದಲ್ಲಿ.ಸಾರ್ವಜನಿಕರಿಗೆ ಮೂಲ ಸೌಕರ್ಯಗಳಿಲ್ಲದೇ ಮಿನಿ ವಿಧಾನಸೌಧ ಸೊರಗುತ್ತಿದೆ.

ಮೈಸೂರು ಜಿಲ್ಲಾ ನಂಜನಗೂಡು ನಗರದ ಊಟಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲ್ಲೂಕು ಮಿನಿ ವಿಧಾನಸೌಧ (ತಾಲ್ಲೂಕು ಆಡಳಿತ ಭವನ) ವನ್ನು 2013ರಲ್ಲಿ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ರವರು ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಸುಸಜ್ಜಿತವಾಗಿ ಎಲ್ಲ ಇಲಾಖೆಗಳನ್ನು ಒಳಗೊಂಡಂತೆ ಇರುವ ಕಟ್ಟಡದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿದೆ.

ದಕ್ಷಿಣ ಕಾಶಿ ನಂಜನಗೂಡು ಮಿನಿ ವಿಧಾನಸೌಧದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಆದರೆ ಕಟ್ಟಡ ಉದ್ಘಾಟನೆಯಾಗಿ ಇಲ್ಲಿಯ ತನಕ ಉಪಯೋಗಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.ಗಬ್ಬೆದ್ದು ನಾರುವ ಶೌಚಾಲಯ ಕಡೆ ಸಾಗುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ಕುಡಿಯುವ ನೀರಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.ಎಸಿ ರೂಮಲ್ಲಿ ಕುಳಿತು ಆಡಳಿತ ನಡೆಸುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ ನೋಂದಣಾಧಿಕಾರಿಗಳ ಕಚೇರಿ ಎರಡನೇ ಮಹಡಿಯಲ್ಲಿದೆ ಆಸ್ತಿ ನೋಂದಣಿ ಮಾಡಲು ಹೆಚ್ಚು ಜನರು ಬರುತ್ತಾರೆ. ಆಸ್ತಿ ಬದಲಾವಣೆಗೆ ಹೆಚ್ಚು ವಯಸ್ಸಾದ ಮತ್ತು ಅಂಗವಿಕಲರು ಬರುತ್ತಾರೆ ಲಿಫ್ಟ್ ಇದ್ದರು ಉಪಯೋಗಕ್ಕೆ ಬರುತ್ತಿಲ್ಲ. ಇಲ್ಲಿವರೆಗೂ ಯಾವುದೇ ತಹಶೀಲ್ದಾರ್ ರವರು ಕ್ರಮವಹಿಸಿಲ್ಲ. ವಯಸ್ಸಾದ ನಾಗರಿಕರು ಮೆಟ್ಟಿಲನ್ನು ಮೇಲತ್ತಿ ಮತ್ತು ಇಳಿಯುವ ಸಂದರ್ಭದಲ್ಲಿ ಜಾರಿ ಬಿದ್ದರೆ ಯಾರು ಜವಾಬ್ದಾರಿ?ಈ ತಾಲ್ಲೂಕ ಕಛೇರಿಯಲ್ಲಿ ಲಿಫ್ಟ್ ಇದ್ದರು ಇಲ್ಲದಂತಾಗಿದೆ. ಹಿರಿಯ ನಾಗರಿಕರು ಕೂರಲು ಆಸನ ವ್ಯವಸ್ಥೆ ಇಲ್ಲ. ಕುಡಿಯಲು ನೀರಿನ ವ್ಯವಸ್ಥೆ ಸರಿ ಇಲ್ಲ. ಶಾಸಕರು ಈ ಬಗ್ಗೆ ಪರಿಶೀಲನೆ ಮಾಡಬೇಕಾಗಿದ ಮತ್ತು ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿಬೇಕಾಗಿದೆ ಎಂದು ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪುಟ್ಟಸ್ವಾಮಿ ಒತ್ತಾಯ ಮಾಡಿದ್ದಾರೆ.

2013 ರಿಂದ ಮೂಲ ಸೌಕರ್ಯಗಳಿಂದ ಸೊರಗಿರುವ
ನಂಜನಗೂಡು ಮಿನಿ ವಿಧಾನಸೌಧಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಈಗೀನ ಶಾಸಕ ದರ್ಶನ್ ಧ್ರುವನಾರಾಯಣ್ ಸರ್ಜರಿ ಮಾಡ್ತಾರಾ ಕಾದಷ್ಟೇ ನೋಡಬೇಕಿದೆ.

Leave a Reply

Your email address will not be published. Required fields are marked *