ಮೈಸೂರು:17 ಆಗಸ್ಟ್ 2021
ಜನಸಂದಣಿ ನಿರ್ವಹಣೆ ಮತ್ತು ಅರಮನೆ ಮೈದಾನದ ರಕ್ಷಣೆಗಾಗಿ ಮೈಸೂರು ಅರಮನೆಯಲ್ಲಿ ಐಪಿ ಸ್ಥಾಪನೆ ಅನುಸ್ಥಾಪನೆಯ ಮೊದಲ ಹಂತವು ರಿಮೋಟ್ ಮಾನಿಟರಿಂಗ್‍ಗಾಗಿ 125+ಆಕ್ಸಿಸ್ ನೆಟ್‍ವರ್ಕ್ ಕ್ಯಾಮೆರಾಗಳನ್ನು ಈಥರ್‍ನೆಟ್‍ನಿಂದ ಶಕ್ತಿಯುತಗೊಳಿಸಲಾಗಿದೆ.
ನೆಟ್‍ವರ್ಕ್ ವಿಡಿಯೋ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆಕ್ಸಿಸ್ ಕಮ್ಯುನಿಕೇಷನ್ಸ್, ಮೈಸೂರು ಅರಮನೆಯಲ್ಲಿ ಸಮಗ್ರ ಮತ್ತು ಬುದ್ಧಿವಂತ ಜನಸಮೂಹ ನಿರ್ವಹಣೆಗಾಗಿ ನೆಟ್‍ವರ್ಕ್ ಕ್ಯಾಮೆರಾಗಳನ್ನು ಯಶಸ್ವಿಯಾಗಿ ಅಳವಡಿಸುವುದರೊಂದಿಗೆ, ಮೈಸೂರು ಅರಮನೆಗಳಿಗೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸಿದೆ.
ಮೈಸೂರು ಅರಮನೆಯು ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ಜನನಿಬಿಡ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ. 72 ಎಕರೆ ಪ್ರದೇಶ ಮತ್ತು ವಾರ್ಷಿಕ 3.5 ದಶಲಕ್ಷ ಸಂದರ್ಶಕರನ್ನು ಸೆಳೆಯುತ್ತಿರುವ ಅರಮನೆಯಲ್ಲಿ ಐಪಿ ಕಣ್ಗಾವಲು ಪರಿಹಾರ ವ್ಯವಸ್ಥೆಯನ್ನು ಸಂಯೋಜಿಸಲು ಆಕ್ಸಿಸ್ ಕಮ್ಯುನಿಕೇಷನ್ಸ್ ಜೊತೆ ಪಾಲುದಾರಿಕೆ ಮಾಡಿದ್ದು, ಅರಮನೆ ಮೈದಾನಗಳಿಗೆ ಮತ್ತು ಪಕ್ಕದ ಪ್ರದೇಶಗಳಿಗೆ ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ವಿಶ್ವಾಸಾರ್ಹ ವೀಡಿಯೋಗಳ ಸಂಗ್ರಹ ಮತ್ತು ಭದ್ರತೆಯನ್ನು ಒದಗಿಸಲಾಗಿದೆ.
ಈ ಕುರಿತು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು, ಮೈಸೂರು ಹೀಗೆ ಹೇಳಿದರು: “ಅರಮನೆಗೆ ಸಂಬಂಧಿಸಿದ ಕಲಾಕೃತಿಗಳ ಸಂಖ್ಯೆ ಮತ್ತು ಶ್ರೀಮಂತ ಪರಂಪರೆಯನ್ನು ಪರಿಗಣಿಸಿ ಈ ವಲಯದಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಮ್ಮ ಆದ್ಯತೆಯು ನಮ್ಮ ಸಂದರ್ಶಕರು ಮತ್ತು ಪೋಷಕರಿಗೆ ಸುರಕ್ಷತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಹೆಚ್ಚಿನ ಮನಶ್ಶಾಂತಿಗಾಗಿ ನಾವು ಐಪಿ ಕ್ಯಾಮೆರಾ ತಂತ್ರಜ್ಞಾನ ಮತ್ತು ಉತ್ತಮ ಗುಣಮಟ್ಟ ಕ್ಯಾಮೆರಾಗಳಿಗೆ ಬಲವಾದ ಉತ್ಪನ್ನ ಬೆಂಬಲದೊಂದಿಗೆ ಅಪ್‍ಗ್ರೇಡ್ ಮಾಡಬೇಕಾಗಿತ್ತು. ಆಕ್ಸಿಸ್ ಕಮ್ಯುನಿಕೇಷನ್ಸ್ ನಮಗೆ ಒಂದು ನಿಶ್ಚಿತ ಪರಿಹಾರ ಮತ್ತು ವ್ಯಾಪಕ ಮರು ಮರಾಟಗಾರರ ನೆಟ್‍ವರ್ಕ್‍ನಿಂದ ನಿರಂತರ ಬೆಂಬಲವನ್ನು ಒದಗಿಸಿದೆ.
ಯಶಸ್ವಿ ಅನುಷ್ಠಾನದ ಕುರಿತು ಮಾತನಾಡಿದ ಇಂಡಿಯಾ ಮತ್ತು ಸಾರ್ಕ್‍ನ ಆಕ್ಸಿಸ್ ಕಮ್ಯುನಿಕೇಷನ್ಸ್, ನಿರ್ದೇಶಕ ಶ್ರೀ ಸುಧೀಂದ್ರ ಹೊಳ್ಳ, “ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪರಿಧಿಯ ರಕ್ಷಣೆ ಮತ್ತು ಜನಸಂದಣಿ ನಿರ್ವಹಣೆಯ ಪರಿಹಾರದ ಅಗತ್ಯವನ್ನು ನಾವು ನೋಡುತ್ತಿದ್ದೇವೆ. ಪ್ರವಾಸೋದ್ಯಮ ವಿಭಾಗವು ನಮ್ಮ ವ್ಯವಹಾರದ ಒಂದು ಕ್ರಿಯಾತ್ಮಕ ಮತ್ತು ನಿರ್ಣಾಯಕ ಭಾಗವಾಗಿದೆ ಮತ್ತು ಪಾರಂಪರಿಕ ತಾಣಗಳ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವುದು ಭಾರತದ ನಾಗರಿಕರಾಗಿ ನಮ್ಮ ಜವಾಬ್ದಾರಿಯಾಗಿದೆ. ಆಕ್ಸಿಸ್‍ನಲ್ಲಿ ನಾವೀನ್ಯತೆಯನ್ನು ಚಾಲನೆ ಮಾಡುವುದು ಮತ್ತು ಮೌಲ್ಯವನ್ನು ತಲುಪಿಸುವುದು ಯಾವಾಲೂ ನಮ್ಮ ಬದ್ಧತೆಯಾಗಿದೆ. ನಮ್ಮ ವಿಶಾಲವಾದ ಪರಿಹಾರಗಳ ದೂರಸ್ಥ ಮೇಲ್ವಿಚಾರಣಾ ಸಾಮಥ್ರ್ಯವನ್ನು ಒದಗಿಸುವಲ್ಲಿ ಮೈಸೂರು ಅರಮನೆಯೊಂದಿಗೆ ಪಾಲುದಾರಿಕೆ ಹೊಂದಿದ್ದಕ್ಕೆ ನಾವು ಹೆಮ್ಮೆ ಪಡುತ್ತೇವೆ’’ ಎಂದು ಹೇಳಿದರು.
ಅನುಭವವನ್ನು ಹೈಲೈಟ್ ಮಾಡಿದ ಬೆಂಗಳೂರು ಡೇಟಾಕಾಮ್ ತಂಡವು, “ಆಸ್ತಿಗೆ ಯಾವುದೇ ಹಾನಿಯಾಗದಂತೆ ಅರಮನೆಯಲ್ಲಿ ಚಟುವಟಿಕೆ ಇದ್ದಾಗಲೇ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಯೋಜನೆಗೆ ಆಯ್ಕೆಯಾದ ಪಾಲುದಾರರಾಗಿರುವುದಕ್ಕೆ ನಾವು ಸಂತೋಷಪಡುತ್ತೇವೆ ಮತ್ತು ಭವಿಷ್ಯದಲ್ಲಿ ಇನ್ನೂ ಹಲವು ಬೆಳವಣಿಗೆಗಳ ಕುರಿತು ನಾವು ಆಕ್ಸಿಸ್ ಆಕ್ಸಿಸ್ ಕಮ್ಯುನಿಕೇಷನ್ಸ್ ಜೊತೆ ಸಹಕರಿಸಲು ಎದುರು ನೋಡುತ್ತಿದ್ದೇವೆ’’ ಎಂದು ಹೇಳಿತು.
ಆಕ್ಸಿಸ್ ಕಮ್ಯುನಿಕೇಷನ್ಸ್ ಬಗ್ಗೆ
ಭದ್ರತೆ ಮತ್ತು ವ್ಯಾಪಾರ ಕುರಿತಾದ ಹೊಸ ವಿಧಾನಗಳನ್ನು ಸುಧಾರಿಸಲು ಒಳನೋಟಗಳನ್ನು ಒದಗಿಸುವ ನೆಟ್‍ವರ್ಕ್ ಪರಿಹಾರಗಳನ್ನು ರಚಿಸುವ ಮೂಲಕ ಆಕ್ಸಿಸ್ ಚರುಕಾದ ಮತ್ತ ಸುರಕ್ಸಿತ ಜಗತ್ತನ್ನು ಶಕ್ತಗೊಳಿಸುತ್ತದೆ .