ದೇಶಕ್ಕಾಗಿ ಹೋರಾಟ ಮಾಡಿದವರ ಸ್ಮರಣೆ ಮಾಡುವುದು ಅತ್ಯಗತ್ಯ: ನೇರಳಕುಪ್ಪೆ ನವೀನ್

 

ಪಿರಿಯಾಪಟ್ಟಣ:17 ಆಗಸ್ಟ್ 2021

ದೇಶದ ಏಕತೆ ಸಮಗ್ರತೆಗಾಗಿ ಹೋರಾಟ ಮಾಡಿದವರ ಸ್ಮರಣೆ ಮಾಡುವುದು ಅತ್ಯಗತ್ಯ ಎಂದು ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯ ಉಪಾಧ್ಯಕ್ಷ ನೇರಳಕುಪ್ಪೆ ನವೀನ್ ತಿಳಿಸಿದರು.

ಪಟ್ಟಣದ ಕನಕ ಸಮುದಾಯ ಭವನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘದ ವತಿಯಿಂದ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣನ ಜನ್ಮದಿನೊತ್ಸೋವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ,ಸ್ವಾತಂತ್ರ್ಯ ಹೋರಾಟಗಾರ.
ಸಂಗೊಳ್ಳಿ ರಾಯಣ್ಣ ಸೇರಿದಂತೆ ದೇಶಕ್ಕಾಗಿ ಹೋರಾಟ ಮಾಡಿ ವೀರಮರಣವನ್ನಪ್ಪಿದವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ರಾಯಣ್ಣನ ಬದುಕಿನುದ್ದಕ್ಕೂ ನಡೆಸಿದ ಹೋರಾಟ ದೇಶದ ಸ್ವಾತಂತ್ರ್ಯಕ್ಕಾಗಿ ಎಂಬುದನ್ನು ಅರಿತು ಎಲ್ಲರೂ ಪ್ರೀತಿಸುವ ಮನೋಭಾವ ರೂಢಿಸಿಕೊಳ್ಳಬೇಕು.

ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಪಿ.ಹೆಚ್.ಡಿ ಪಧವಿದರ ಸನ್ಯಾಸೀಪುರ ಡಾ.ಎಸ್ ಕೆ ಮಂಜು, ಸಮಾಜ ಸೇವಕ ತಾತನಹಳ್ಳಿ ಶಿವಣ್ಣ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿಗೆ 3 ನೇ ಸ್ಥಾನ ಗಳಿಸಿದ ಕೆ.ಎಸ್.ದೀಪಿಕಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಂತೆಕೊಪ್ಪಲು ರಮೇಶ್, ತಾ. ಪಂ. ಮಾಜಿ ಅಧ್ಯಕ್ಷ ಚಿಕ್ಕೇಗೌಡ, ಮುಖಂಡರಾದ ಕೋಮಲಾಪುರ ಶಿವಪ್ಪ, ಗ್ರಾ. ಪಂ. ಸದಸ್ಯ ಆರ್.ತುಂಗಾ ಪರಮೇಶ್, ರಾಜೇಗೌಡ, ಗುರುಮೂರ್ತಿ, ಅಲ್ಪ ನಾಯಕನಹಳ್ಳಿ ವಿಜಿಕುಮಾರ್, ತಾಲ್ಲೂಕು ಅಧ್ಯಕ್ಷ ಅಲ್ಪನಾಯಕನಹಳ್ಳಿ ಮಹದೇವ್, ಹಾಜರಿದ್ದರು

Leave a Reply

Your email address will not be published. Required fields are marked *