ಮೈಸೂರು :24 ಜನವರಿ 2022
ನಂದಿನಿ ಮೈಸೂರು
ಇತ್ತೀಚೆಗೆ ಯುವಕರು ಮದುವೆಯಾಗೋಕೆ ಹುಡುಗಿನೇ ಸಿಕ್ತೀಲ್ಲಾ ಅಂತ ಬೇಸರ ವ್ಯಕ್ತಪಡಿಸುತ್ತಾರೆ.ಆದರೇ ಇಲ್ಲೊಂದು ಅಜ್ಜ ಅಜ್ಜಿ ಹಿರಿಯ ವಯಸ್ಸಿನಲ್ಲಿ ಹಸೆಮಣೆ ಏರಿದ್ದಾರೆ.
ಇರ್ದುಕ್ಕೆ ತಾತಾನ ಹೆಸರು ಹಾಜಿ ಮುಸ್ತಫಾ ಅಜ್ಜಿ ಹೆಸರು ಫಾತಿಮಾ ಬೇಗಂ. ಮುಸ್ಲಿಂ ವೃದ್ದನ ವಯಸ್ಸು 85 ಆದ್ರೇ ವೃದ್ದೆಯ ವಯಸ್ಸು 65 ವರ್ಷ.ಮುಸ್ತಫಾಮಕ್ಕಳಿಗೆ ಮದುವೆ ಮಾಡಿ ಮೊಮ್ಮೊಕ್ಕಳು ಸಹ ಇದ್ದಾರೆ.ಅಪ್ಪ ನಿಮಗೆ ಈ ವಯಸ್ಸಲ್ಲಿ ಮತ್ತೊಂದು ನಿಖಾ ಬೇಕಾ ಅನ್ನೋರೆ ಹೆಚ್ಚು ಆದರೆ ತಂದೆ ಮುಸ್ತಫಾ ಆಸೆಯಂತೆ ಮಕ್ಕಳು ಮೊಮ್ಮೊಕ್ಕಳು ಇಳಿ ಜೀವಗಳಿಗೆ 3ನೇ ನಿಖಾ ಮಾಡಿಸಿ ಗಮನ ಸೆಳೆದಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿಯಾಗಿರುವ 85 ವರ್ಷದ ಹಾಜಿ ಮುಸ್ತಫಾ ಬಿಳಿ ಶರ್ಟ್ ಕಪ್ಪು ಬಣ್ಣದ ಕೋರ್ಟ್ ಹಾಕಿಕೊಂಡಿದ್ರೇ ಹಾಗೂ 65 ವರ್ಷದ ಫಾತಿಮಾ ಹಸಿರು ಬಣ್ಣದ ಸೀರೆಯುಟ್ಟು ಇಳಿ ವಯಸ್ಸಿನಲ್ಲೂ ನಾಚಿಕೊಳ್ಳುತ್ತಿದ್ರೂ.ಹಾಜಿ ಮುಸ್ತಫಾ ಫಾತಿಮಾ ಬೇಗಂ ಸತಿ ಪತಿಗಳಾಗಿದ್ದಾರೆ. ಮುಸ್ತಫಾ ಕುರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ . ಮುಸ್ತಫಾಗೆ 9 ಜನ ಮಕ್ಕಳು . ಎಲ್ಲಾ ಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದಾರೆ . ಎಲ್ಲಾ ಮಕ್ಕಳು ತಮ್ಮ ಕೆಲಸ ನೋಡಿಕೊಂಡು ತಮ್ಮ ಪಾಡಿಗೆ ತಾವಿದ್ದಾರೆ . ಪತ್ನಿಯ ಜೊತೆ ಹಾಜಿ ಮುಸ್ತಫಾ ನಿವೃತ್ತ ಜೀವನ ನಡೆಸುತ್ತಿದ್ದರು . ಎರಡು ವರ್ಷದ ಹಿಂದೆ ಮುಸ್ತಫಾ ಪತ್ನಿ ಖುರ್ಷಿದ್ ಬೇಗಂ ನಿಧನರಾಗಿದ್ದಾರೆ . ಅಂದಿನಿಂದಲೂ ಮುಸ್ತಫಾ ಒಂಟಿಯಾಗಿ ಜೀವನ ನಡೆಸುತ್ತಿದ್ದರು .ಕೊನೆಗೂ ತನಗೊಂದು ಜೊತೆಗಾತಿ ಬೇಕು ಎಂದು ನಿರ್ಧರಿಸಿದ ಮುಸ್ತಫಾಗೆ ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ಧೆ ಫಾತಿಮಾ ಬೇಗಂ ಕಣ್ಣಿಗೆ ಬಿದ್ದಿದ್ದಾರೆ . ಮೊದಲು ಮುಸ್ತಫಾ ತನ್ನ ಇಂಗಿತವನ್ನು ಫಾತಿಮಾ ಬೇಗಂ ಅವರಿಗೆ ತಿಳಿಸಿದ್ದಾರೆ . ಒಂಟಿಯಾಗಿದ್ದ ಫಾತಿಮಾ ಬೇಗಂ ಸಹಾ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ .
ತಮ್ಮ ಮನೆಯವರಿಗೆ ಮುಸ್ತಫಾ ವಿಷಯ ತಿಳಿಸಿದ್ದಾರೆ . ಮೊದಲು ಇಡೀ ಕುಟುಂಬಕ್ಕೆ ಇದು ಅಚ್ಚರಿಯಾಗಿದೆ . ಆದರೂ ತಂದೆಯ ಪರಿಸ್ಥಿತಿ ಅರ್ಥ ಮಾಡಿಕೊಂಡ ಮಕ್ಕಳು ಮೊಮ್ಮಕಳು ತಂದೆಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ . ತಂದೆಯ ಇಚ್ಛೆಯಂತೆ ನಿಖಾಗೆ ದಿನಾಂಕ ಫಿಕ್ಸ್ ಮಾಡಿದ್ದಾರೆ . ಗೌಸಿಯಾನಗರದ ತಮ್ಮ ಮನೆಯಲ್ಲಿ ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ . ಮುಸ್ತಫಾ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸಮ್ಮುಖದಲ್ಲಿ ಫಾತಿಮಾಬೇಗಂ ವರಿಸಿದ್ದಾರೆ . ಅಪರೂಪದ ಮದುವೆಗೆ ಸಾಕ್ಷಿಯಾದರು ಮಕ್ಕಳು ಮೊಮ್ಮಕ್ಕಳು.