ಮೈಸೂರು ಟು ಚೆನ್ನೈಗೆ ಹಾರಿದ ಹೃದಯ ಅಂಗಾಗ ದಾನ ಮಾಡಿ ಐವರಿಗೆ ಸಾರ್ಥಕನಾದ ದರ್ಶನ್

54 Views

ಮೈಸೂರು:23 ಜನವರಿ 2022

ನಂದಿನಿ ಮೈಸೂರು

ನೋಡೋಕೆ ಹುಡುಗ ತುಂಬನೇ ಸ್ಮಾರ್ಟ್ ಆಗಿದ್ದಾನೆ.ಏನ್ ಐಟು ಏನ್ ವೈಟು. ಹುಡುಗನ್ನ ನೋಡ್ತೀದ್ರೇ ನೋಡೋ ಹುಡುಗಿಗೆ ಆತನ ಹೃದಯ ಕದಿಬೇಕು ಅನ್ಸುತ್ತೆ ಅಲ್ವಾ.
ಹಾಗೇ ಅನ್ಸಿದ್ರೂ ಆತನ ಹೃದಯ ನಿಮಗೆ ಸಿಗಲ್ಲ ಬಿಡಿ. ಆತ ಆಸ್ಪತ್ರೆಯಲ್ಲಿ ಇದ್ರೇ ಆತನ ಹೃದಯ ಚನೈಗೆ ಹಾರಿತ್ತು.ಅಯ್ಯೋ ಯಾಕೆ ಅಂತ ಯೋಚಿಸ್ತಿದ್ದೀರಾ?

ಸಾರ್ಥಕ ಜೀವ ಅಂದ್ರೇ ಇದೆ ಅನ್ಸುತ್ತೆ.ದರ್ಶನ್ ಎಂಬ 24 ವರ್ಷದ ಯುವಕ ಉಸಿರು ಚೆಲ್ಲಿದ್ದ.ಬದುಕಿ ತಂದೆ ತಾಯಿಗೆ ನೆರಳಾಗಿರಬೇಕಿತ್ತು.ಆದರೆ ಪೋಷಕರನ್ನ ಅರ್ಧ ದಾರಿಯಲ್ಲಿಯೇ ಬಿಟ್ಟು ಹೃದಯದ ಜೊತೆ ಚನೈಗೆ ಹಾರಿದ ದರ್ಶನ್ 5 ಜನರ ಜೀವಕ್ಕೆ ನೆರವಾಗಿದ್ದಾನೆ.

24 ವರ್ಷ ವಯಸ್ಸಿನ ಶ್ರೀ ದರ್ಶನ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಿಂದ ಜನವರಿ 18 ರಂದು ರಾತ್ರಿ 9.27 ಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಯಿತು. ಆರಂಭಿಕ ಸಿಟಿ ಸ್ಕ್ಯಾನಿಂಗ್ ನಲ್ಲಿ ಮೆದುಳಿನ ಕಾಂಡದ ಇನ್ಫಾರ್ಕ್ಟ್ ಗೋಚರಿಸಿತು. ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.
 
ದರ್ಶನ್ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದಾಗ ಎರಡು ದಿನಗಳ ಕಾಲ ಲೈಫ್ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು. 3ನೇ ದಿನ ಜನವರಿ 21 ರಂದು ಬೆಳಗ್ಗೆ 4.00 ಗೆ, ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಮೆದುಳಿನ ನಿಷ್ಕ್ರಿಯೆ “ಬ್ರೆನ್ ಡೆಡ್” ಯಂದು ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯ ಪ್ಯಾನೆಲ್ಲಿಸ್ಟ್ ನಲ್ಲಿರುವ ವೈದ್ಯರು ಘೋಷಿಸಿದರು.ಮೊದಲು ಶ್ರೀ ದರ್ಶನ್ ರವರು ಆರೋಗ್ಯವಾಗಿದ್ದರು ಮತ್ತು ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತ  ಪಡಿಸಲಾಯಿತು. ನಿಗದಿತ ಪ್ರೋಟೋಕಾಲ್ಗಳ  ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು, ಈ ಸಂದರ್ಭದಲ್ಲಿ ದರ್ಶನ್ ರವರ ತಂದೆ ಅಂಗಾಂಗ ದಾನ ಮಾಡಲು ಮುಂದೆ ಬಂದರು.

ಜನವರಿ 21 ರಂದು 2.45 pm ಗೆ    ದರ್ಶನ್ ರವರ ಅಂಗಾಗಗಳಾದ
1.
ಹೃದಯ
ಚೆನ್ನೈನ MGM ಹೆಲ್ತ್‌ಕೇರ್‌ಗೆ ತುರ್ತು ಹೃದಯ ಕಸಿಗಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಏರ್ ಲಿಫ್ಟ್ ಮಾಡಲಾಗಿದೆ
2.
ಒಂದು ಕಿಡ್ನಿ ಮತ್ತು ಯಕೃತ್ತು
ಅಪೋಲೊ ಬಿಜ಼ಿಎಸ್ ಆಸ್ಪತ್ರೆ, ಮೈಸೂರು 
3.
ಒಂದು ಕಿಡ್ನಿ
ಆಸ್ಟರ್ ಸಿಎಂಐ, ಬೆಂಗಳೂರು
4.
ಕಾರ್ನಿಯಾ
JSS ಐ ಬ್ಯಾಂಕ್ ಮೈಸೂರು ಇಲ್ಲಿಗೆ ರವಾನಿಸಲಾಗಿದೆ.

ಮೈಸೂರು ನಗರ ಸಂಚಾರ ಪೊಲೀಸ್ ವಿಭಾಗಕ್ಕೆ ಮತ್ತು ಮಂಡಕಳ್ಳಿ ವಿಮಾನ ನಿಲ್ದಾಣ ಕೆಎಸ್‌ಐಎಸ್‌ಎಫ್ ಪೊಲೀಸ ರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಯಿಂದ  ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ,ವರೆಗೆ  ತುರ್ತು ಅಂಗ ವರ್ಗಾವಣೆಗಾಗಿ ‘ಗ್ರೀನ್  ಕಾರಿಡಾರ್’ ನ್ನು ರಚಿಸಲು ತಮ್ಮ ಬೆಂಬಲವನ್ನು ನೀಡಿದ್ದಕ್ಕಾಗಿ ಅಪೋಲೋ ಆಸ್ಪತ್ರೆ ಧನ್ಯವಾದಗಳನ್ನು ಅರ್ಪಿಸುತ್ತದೆ.


ದರ್ಶನ್ ಗೆ ಸಾಯೋ ವಯಸ್ಸಾಗಿತ್ತಾ ಹೇಳಿ.ಆತ ಇನ್ನೂ ಹೆಚ್ಚು ವರ್ಷ ಬದುಕಬೇಕಿತ್ತು.ಬದುಕಿ ಬಾಳಬೇಕಿತ್ತು ಎಂದೆನಿಸುತ್ತದೆ ಆದರೇ ವಿಧಿಯ ಆಟದ ಮುಂದೆ ತಲೆ ಬಾಗಲೇ ಬೇಕು.ದರ್ಶನನ ದೇಹದಲ್ಲಿ ಉಸಿರಿಲ್ಲದಿದ್ದರೂ 5 ಜನರ ಜೀವಕ್ಕೆ ಉಸಿರಾಗಿ ಸಾರ್ಥಕ ದರ್ಶನ ನೀಡಿದ್ದಾನೆ ಎನ್ನುತ್ತಾ ದರ್ಶನ್ ರವರ ಅಂಗಾಂಗ ದಾನಕ್ಕೆ ಭಾರತ್ ನ್ಯೂಸ್ ಟಿವಿ ಒಂದು ಸಲಾಂ ಹೇಳಿದೆ.

ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು

Leave a Reply

Your email address will not be published.