ಕಲ್ಯಾಣ ಕಾರ್ಯಕ್ಕೆ ವೇದಿಕೆಯಾದ ವಾರ್ಡ್ ಸಭೆ ಪಿಡಿಓ ಗ್ರಾಮಸ್ಥರ ನೆರವಿನಿಂದ ಒಂದಾದ ಪ್ರೇಮಿಗಳು ಮದುವೆಗೆ ಸಾಕ್ಷಿಯಾದ ವಾರ್ಡ್ ಸದಸ್ಯರು

ನಂಜನಗೂಡು:24 ಜನವರಿ 2022

ನಂದಿನಿ ಮೈಸೂರು

ಆ ಸಭೆಯಲ್ಲಿ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು ಆದರೆ ಆ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿತ್ತು.ಪ್ರೀತಿಗೆ ಮನೆಯವರ ವಿರೋದ ವ್ಯಕ್ತಪಡಿಸಿದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದೇ ಸಂಧಿಗ್ಧ ಪರಿಸ್ಥಿತಿಗೆ ಸಿಲುಕಿದ್ದ ಜೋಡಿಗೆ ಪಿಡಿಓ ಮಹದೇವಸ್ವಾಮಿ ಹಾಗೂ ಗ್ರಾಮಸ್ಥರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.


ಮದುವೆ ಆಗಲು ಪೋಷಕರ ವಿರೋಧದಿಂದ ತತ್ತರಿಸಿದ್ದ ಪ್ರೇಮಿಗಳ ನೆರವಿಗೆ ಗ್ರಾಮ ಪಂಚಾಯ್ತಿ ಪಿಡಿಓ ನೆರವಿಗೆ ಬಂದಿದ್ದಾರೆ.ಇಂದು ನಡೆದ ವಾರ್ಡ್ ಸಭೆ ಪ್ರೇಮಿಗಳಿಗೆ ಹಸೆಮಣೆಯಾಗಿ ಮಾರ್ಪಟ್ಟಿದೆ. ಪೋಷಕರನ್ನ ಮನ ಒಲಿಸುವಲ್ಲಿ ಯಶಸ್ವಿಯಾದ ಪಿಡಿಓ ಪ್ರೇಮಿಗಳನ್ನ ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಒಂದು ಮಾಡಿ ದಾಂಪತ್ಯ ಜೀವನ ಆರಂಭಿಸಲು ನೆರವಾಗಿದ್ದಾರೆ.ಪಿಡಿಓ ಮಹದೇವಸ್ವಾಮಿ ರವರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ.


ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮಪಂಚಾಯ್ತಿ ಕಚೇರಿ ಇಂದು ಅಕ್ಷರಸಃ ಮದುವೆ ಮಂಟಪವಾಯ್ತು.ವಾರ್ಡ್ ಗಳ ಕುಂದುಕೊರತೆಗಳನ್ನ ಬಗೆಹರಿಸಲು ಕರೆಯಲಾದ ವಾರ್ಡ್ ಸಭೆ ಇಂದು ಪ್ರೇಮಿಗಳನ್ನ ಒಂದು ಮಾಡಿತು.ಪಿಡಿಓ ಮಹದೇವಸ್ವಾಮಿ ಸಮಯ ಪ್ರಜ್ಞೆ ಪ್ರೇಮಿಗಳಿಗೆ ನೆರವಾಯಿತು.ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಹರದನಹಳ್ಳಿಯ ಪ್ರೇಮಿಗಳಾದ ಬಸವರಾಜು(24) ಹಾಗೂ ಸುಚಿತ್ರ(19) ಬಾಳಸಂಗಾತಿಗಳಾಗಿದ್ದಾರೆ.

ಹರದನಹಳ್ಳಿಯ ಈ ಜೋಡಿ ಎರಡು ವರ್ಷಗಳಿಂದ ಪ್ರೀತಿಸುತ್ತಿತ್ತು.ಮದುವೆಗೆ ಇಬ್ಬರ ಮನೆಯಲ್ಲೂ ಭಾರಿ ವಿರೋಧ ವ್ಯಕ್ತವಾಗಿದೆ.ಈ ವಿಚಾರದಲ್ಲಿ ಎರಡೂ ಮನೆಗಳ ಮಧ್ಯೆ ಗಲಾಟೆ ಆಗಿದೆ.ಪೊಲೀಸ್ ಠಾಣೆ ಮೆಟ್ಟಿಲೂ ಏರಿದೆ.ಆದರೆ ಜೋಡಿಗಳು ಒಂದಾಗಲು ಸಾಧ್ಯವೇ ಆಗಿರಲಿಲ್ಲ.ಇಂದು ಹರದನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಾರ್ಡ್ ಸಭೆ ಹಮ್ಮಿಕೊಳ್ಳಲಾಗಿತ್ತು.ವಾರ್ಡ್ ಸದಸ್ಯರು ಸೇರಿದಂತೆ ಪಿಡಿಓ ಮಹದೇವಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು.ಸಭೆ ನಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯ್ತಿ ಕಚೇರಿ ಪಕ್ಕದ ಮನೆಯಲ್ಲೇ ಪ್ರೇಮಿಗಳ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು.ಎರಡೂ ಮನೆಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು.ಗ್ರಾಮದ ಮುಖಂಡರು ದಂಡ ಕಟ್ಟಿಸಿಕೊಂಡು ಮದುವೆ ಮಾಡಿಸಲು ತೀರ್ಮಾನಿಸಿದ್ರು.ಗಲಾಟೆ ಶಬ್ಧ ಕೇಳಿದ ಪಿಡಿಓ ಮಹದೇವಸ್ವಾಮಿ ಸ್ಥಳಕ್ಕೆ ಧಾವಿಸಿ ಜಗಳದ ಕಾರಣ ತಿಳಿದುಕೊಂಡಿದ್ದಾರೆ.

ಒಪ್ಪಿಗೆಗೆ ದಂಡ ಹಾಕುವುದು ಕಾನೂನಿಗೆ ವಿರೋಧ ಎಂದು ಮಹದೇವಸ್ವಾಮಿ ಮುಖಂಡರಿಗೆ ತಿಳಿ ಹೇಳಿದ್ದಾರೆ.ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳಬಾರದೆಂದು ಸಲಹೆ ನೀಡಿದ್ದಲ್ಲದೆ ಪ್ರೇಮಿಗಳನ್ನ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಕರೆತಂದು ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಸಿದ್ದಾರೆ.ಜೊತೆಗೆ ಪ್ರೇಮಿಗಳ ಪೋಷಕರನ್ನೂ ಸಹ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವರಿಬ್ಬರು ಪ್ರೀತಿಸುತ್ತಿದ್ದರೂ ಅವರ ಮದುವೆಗೆ ಪೋಷಕರ ವಿರೋಧವಿತ್ತು. ಮೂರ್ನಾಲ್ಕು ದಿನಗಳ ಹಿಂದೆ ಮನೆ ತೊರೆದು ಮದುವೆಯಾಗಲು ಹೊರಟಿದ್ದರು.ಮತ್ತೆ ಊರಿಗೆ ಹಿಂದಿರುಗುತ್ತಿದ್ದಂತೆ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿತ್ತು.ಕಾನೂನಿನ ಬಗ್ಗೆ ಎರಡು ಕುಟುಂಬದವರಿಗೆ ತಿಳಿಸಿದ್ದೇನೆ.ನಂತರ ಎರಡು ಕುಟುಂಬದವರು ಒಪ್ಪಿಗೆ ಸೂಚಿಸಿದ್ರು.ವಾರ್ಡ್ ಸಭೆಯಲ್ಲಿಯೇ ಸದಸ್ಯರು ಎದುರು ಹಾರ ಬದಲಾಯಿಸಿಕೊಂಡಿದ್ದಾರೆ.ಕಾನೂನಿನ ಪ್ರಕಾರ ಇನ್ನೇರಡು ದಿನಗಳ ಒಳಗೆ ವಿವಾಹ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದ್ದೇನೆ. ವಧು ತನ್ನ ಪತ್ನಿ ಜೊತೆ ಖುಷಿಯಿಂದ ಮನೆಗೆ ತೆರಳಿದ್ದಾನೆ ಎಂದು ಪಿಡಿಓ ಮಹದೇವಸ್ವಾಮಿ ಭಾರತ್ ನ್ಯೂಸ್ ಟಿವಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *