ನಂದಿನಿ ಮೈಸೂರು
ಆರೋಗ್ಯವೇ ಅತಿ ದೊಡ್ಡ ಆದಾಯ : ಮುನೀಂದ್ರಮ್ಮ
ಇಂದು ನನ್ನವ್ವ ಸಾಂಸ್ಕೃತಿಕ ಕಲಾತಂಡ ಯಾಚೇನಹಳ್ಳಿ ಮೈಸೂರಿನ ರಾಘವೇಂದ್ರ ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸಿಗುವ ಮತ್ತು ಜಾಗೃತಿ ಬೀದಿ ನಾಟಕ ಕಾರ್ಯಕ್ರಮವನ್ನು
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುನೀಂದ್ರಮ್ಮ ರವರು ತಮಟೆ ನುಡಿಸುವುದರ ಮುಖಾಂತರ ಚಾಲನೆ ನೀಡಿದರು.
ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮದಲ್ಲಿ 2025ರ ಒಳಗೆ ಕ್ಷಯ ಮುಕ್ತ ಭಾರತವನ್ನಾಗಿಸಲು ಕ್ಷಯಾ ರೋಗದ ಬಗ್ಗೆ ಜಾಗೃತಿ ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ಯೂ, ಜಾಗೃತಿ ಹದಿಹರೆಯದವರ, ಸಮಸ್ಯೆ ಮತ್ತು ಪರಿಹಾರ, ಸ್ನೇಹ ಕ್ಲಿನಿಕ್, ತಾಯಿ ಕಾರ್ಡ್ ,ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕ ಆಹಾರ, ತಾಯಿ ಮಗುವಿನ ಮರಣ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ಬಾಲ್ಯ ವಿವಾಹ ಹಾಗೂ ಗರ್ಭಿಣಿ ಬಾಣಂತಿಯರು ಅನುಸರಿಸಬೇಕಾದ ಮುಂಜಾಗ್ರತೆ ಕಾಳಜಿಯ ಬಗ್ಗೆ,ಅಂಗನವಾಡಿ ಮಾತೃಪೂರ್ಣ ಯೋಜನೆ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆಭಾ ಕಾರ್ಡ್, 5 ಲಕ್ಷದವರೆಗೆ ಉಚಿತ ಆರೋಗ್ಯ ಸೇವ, ತುರ್ತುಸೇವೆಗೆ ಉಚಿತ ಸೇವೆಗಳ ಬಗ್ಗೆ .
ಆರೋಗ್ಯ ಇಲಾಖೆಯ ಎಲ್ಲಾ ಮಾಹಿತಿಯ 104 ಸಂಖ್ಯೆಯ ಮಹತ್ವ, ಬಾಣಂತಿಯರಿಗೆ ನಗು ಮಗು ವಾಹನ ಸೌಲಭ್ಯ, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಪ್ರೇರೇಪಣೆ, ಈ ಎಲ್ಲಾ ನಮ್ಮ ಆರೋಗ್ಯ ಇಲಾಖೆಯ ಸೌಲಭ್ಯಗಳ ಕುರಿತು ಉತ್ತಮವಾಗಿ ಬೀದಿ ನಾಟಕದ ಮುಖಾಂತರ ಈ ನನ್ನವ್ವ ತಂಡ ಕಾರ್ಯಕ್ರಮವನ್ನು ನೀಡಿದೆ ಇದರೊಟ್ಟಿಗೆ ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪ್ರತಿಯೊಬ್ಬ ನಾಗರಿಕ ಬಂಧುಗಳು ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಿ ಇಂದು ನೂರಕ್ಕೆ 90% ಸರ್ಕಾರಿ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುತ್ತಿವೆ ಅದು ಯಾವ ಯಾವ ಆಸ್ಪತ್ರೆಯಲ್ಲಿ ಯಾವ ಯಾವ ಸೌಲಭ್ಯಗಳು ದೊರೆಯುತ್ತಿವೆ ಎಂಬುದರ ಬಗ್ಗೆ ಇಲ್ಲಿ ತುಂಬಾ ಚೆನ್ನಾಗಿ ನಾಟಕದ ಮುಖಾಂತರ ತಿಳಿಸಿ ಕೊಡಲಾಗಿದೆ ನಮ್ಮ ಆರೋಗ್ಯ ಇಲಾಖೆಯ ಸಂದೇಶವೇ ಎಲ್ಲೆಡೆ ಆರೋಗ್ಯ ಎಲ್ಲರಿಗೂ ಆರೋಗ್ಯ ವಾಗಿರುವುದರಿಂದ ಎಲ್ಲರೂ ಆರೋಗ್ಯಕರಾಗಿರಲು ಸರ್ಕಾರ ಸಾಕಷ್ಟು ಶ್ರಮವಹಿಸುತ್ತಿದೆ ಹಾಗಾಗಿ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವ ಸಲುವಾಗಿ ಮೈಸೂರು ಜಿಲ್ಲೆಯಾದ್ಯಂತ ಒಟ್ಟು ಎಂಟು ತಂಡಗಳನ್ನು ಆಯೋಜನೆ ಮಾಡಿ ಕಳೆದ 15ನೇ ತಾರೀಖಿನಿಂದ 23ನೇ ತಾರೀಖಿನವರೆಗೂ ಒಂದು ವಾರ ಆಯ್ದ ಪ್ರದೇಶಗಳಲ್ಲಿ ಈ ಜನಜಾಗೃತಿ ಬೀದಿ ನಾಟಕವನ್ನು ಆಯೋಜಿಸಲಾಗಿದೆ ಇದರ ಸದುಪಯೋಗ ಪ್ರತಿಯೊಬ್ಬ ನಾಗರಿಕ ಬಂಧುಗಳು ಪಡೆಯಬೇಕೆಂಬುದು ನಮ್ಮ ಇಲಾಖೆಯ ಮಹದಾಕಾಂಕ್ಷೆಯಾಗಿದೆೆ.