ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 150 ಹೆಚ್ಚು ಸ್ಥಾನದ ವಿಶ್ವಾಸವಿದೆ: ಮಾಜಿ ಸಚಿವ ದಲಿತ ನಾಯಕ ಮುನಿಯಪ್ಪ

ಬಸವರಾಜು / ನಂದಿನಿ ಮೈಸೂರು

ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 150 ಹೆಚ್ಚು ಸ್ಥಾನದ ವಿಶ್ವಾಸವಿದೆ: ಮಾಜಿ ಸಚಿವ ದಲಿತ ನಾಯಕ ಮುನಿಯಪ್ಪ

ತಾಂಡವಪುರ ಫೆಬ್ರುವರಿ 21 ಕೋಲಾರದಲ್ಲಿ ಸಿದ್ದರಾಮಯ್ಯನವರು ಗೆಲ್ಲುವ ಮೂಲಕ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ದಲಿತ ನಾಯಕ ಮಾಜಿ ಸಚಿವ ಮುನಿಯಪ್ಪ ಹೇಳಿದರು.

ಅವರು ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಅಮಿಕೊಂಡಿದ್ದ ಪ್ರಜಾ ಧ್ವನಿ ಯಾತ್ರಾ ಸಮಾವೇಶದಲ್ಲಿ ಭಾಗವಹಿಸಿ ಮುಂದುವರೆದು ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಳಿತ ವಿರುದ್ಧ ರಾಜರ ಜನತೆ ತಿರುಗಿಬಿದ್ದಿದ್ದು ಈ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ಮುನಿಯಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ ವರುಣ ಕ್ಷೇತ್ರದ ಮತದಾರರು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ರಾಷ್ಟ್ರದ ನಾಯಕನಾಗಿ ಮಾಡಲು ಹಾಗೂ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ನಿಲ್ಲುವಂತಹ ಶಕ್ತಿಯನ್ನು ವರುಣ ಕ್ಷೇತ್ರದ ಮತದಾರರು ಶಕ್ತಿ ನೀಡಿದ್ದೀರಿ ಹಾಗೆಯೇ ಈ ಕ್ಷೇತ್ರದ ಯುವ ನಾಯಕ ಶಾಸಕ ಡಾಕ್ಟರ್ ಯತಿಂದ್ರ ಸಿದ್ರಾಮಯ್ಯನವರ ಕಾರ್ಯವೈಕರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಕೆಸಿ ಯವರು ಈ ಕ್ಷೇತ್ರದ ಮತದಾರರು ಇಂತಹ ಒಳ್ಳೆಯ ಗುಣವುಳ್ಳ ಬಡವರ ಬಗ್ಗೆ ಅಪಾರ ಕಾಳಜಿ ವಹಿಸಿರುವ ಇಂತಹ ನಾಯಕನನ್ನು ಪಡೆದಿರುವುದು ನಿಮ್ಮ ಪುಣ್ಯ ಎಂದರು ಅಲ್ಲದೆ ಈ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾನ ನಡೆಸಿ ಈ ಪ್ರಜಾ ಧ್ವನಿ ಯಾತ್ರೆ ಹಮ್ಮಿಕೊಂಡಿರುವುದು ನಿಮ್ಮ ಕಷ್ಟ ಸುಖಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ನಾವು ಮುಂದಿರುವುದು ಜೊತೆಗೆ ಈ ಚುನಾವಣೆಯಲ್ಲಿ ಶಾಸಕ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರ ಹಾಗೂ ಮಾಜಿ ಸಚಿವ ಎಸ್ ಸಿ ಮಹದೇವಪ್ಪ ಸುನಿಲ್ ಬಾಸ್ ಆರ್ ಧ್ರುವನಾರಾಯಣ್ ಅವರ ಕೈ ಫಲಪಡಿಸಲು ಈ ಯಾತ್ರೆಯ ಉದ್ದೇಶವಾಗಿದೆ ಎಂದರು ಶಾಸಕ ಡಾಕ್ಟರ್ ಯತಿಂದ್ರ ಸಿದ್ರಾಮಯ್ಯನವರು ಮಾತನಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಬಡವರ ಅಕೌಂಟಿಗೆ 15 ಸಾವಿರ ರೂಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು ಆದರೆ ಇದುವರೆಗೂ ಸಹ ಅವರ ಅಕೌಂಟಿಗೆ 15 ರೂಗಳನ್ನು ಸಹ ನೀಡಿಲ್ಲ ಎಂದು ಕಿಡಿ ಕಾರ್ಯಕರ್ತ ಶಾಸಕರು ಬಿಜೆಪಿಯವರು ಬಡವರ ಪಕ್ಷವಲ್ಲ ಅವರು ಶ್ರೀಮಂತರ ಪರವಾದ ಪಕ್ಷ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಬಡವರಿಗೆ ರೈತರಿಗೆ ದೀನ ದಲಿತರಿಗೆ ಹಿಂದುಳಿದ ವರ್ಗದವರಿಗೆ ಉಳಿಗಾಲವಿಲ್ಲ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ರಾಜ್ಯ ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಜಿ ಸಚಿವರಾದ ಮುನಿಯಪ್ಪ ಎಚ್ಎಮ್ ರೇವಣ್ಣ ಡಾಕ್ಟರ್ ಎಚ್ ಸಿ ಮಹದೇವಪ್ಪ ಉಗ್ರಪ್ಪ ಚಂದ್ರಶೇಖರ್ ವಿಧಾನಪರಿಷತ್ ಸದಸ್ಯ ಡಾ ಡಿ ತಿಮ್ಮಯ್ಯ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಎಸ್ ಸಿ ಬಸವರಾಜು ಬಿ ಎಂ ರಾಮು ವೀರಶೈವ ಮುಖಂಡರಾದ ಗುರುಪಾದ ಸ್ವಾಮಿ ವರುಣ ಮಹೇಶ್ ಸುನಿಲ್ ಬಾಸ್ ಪುಷ್ಪ ಅಮರನಾಥ್ ಚಲನಚಿತ್ರ ಸಂಗೀತ ನಿರ್ದೇಶಕ ಸಾಧು ಕೋಕಿಲ ಹಾಗೂ ಮಲೆ ಮಾದೇಶ್ವರ ಬೆಟ್ಟದ ಮಾಜಿ ಧರ್ಮದರ್ಶಿ ಕೇಳಿನಪುರ ಮಹಾದೇವಪ್ಪ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ ಮರಿಗೌಡ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *