ಮೈಸೂರು:15 ಜುಲೈ 2022
ನಂದಿನಿ ಮೈಸೂರು
ಕರ್ನಾಟಕ ಸೇನಾಪಡೆ ವತಿಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರವರ ಜಯಂತಿ ಆಚರಿಸಲಾಯಿತು.
ಮಹಾರಾಜ ಕಾಲೇಜು ಆವರಣದಲ್ಲಿರುವ ಅವರ ಪ್ರತಿಮೆಗೆ ಗಣ್ಯರು ಪುಷ್ಪಾರ್ಚನೆ ಮಾಡಿ, ಸಿಹಿ ವಿತರಣೆ ಮಾಡುವ ಮೂಲಕ ಅವರ ಹುಟ್ಟುಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿದರು.
ಡಾ. ಬಿ ಆರ್ ನಟರಾಜ ಜೋಯಿಸ್ ರವರು ಮಾತನಾಡಿ, ಮುಮ್ಮಡಿ ರವರ ಕೊಡುಗೆ ಮೈಸೂರಿಗೆ ಅಪಾರ, ಶಿಕ್ಷಣಕ್ಕೆ ಒತ್ತುವರಿಯನ್ನು ನೀಡಿದಂಥ ಮಹಾನುಭಾವರು, ಮೈಸೂರು ಮಹಾರಾಜ ಕಾಲೇಜು ಸ್ಥಾಪಿಸಿದವರು. ನಾವು ಆಗಾಗ ಗುರು ಹಿರಿಯರುಗಳನ್ನು ನೆನಪಿಸಿಕೊಳ್ಳುತ್ತಿರಬೇಕು ಹಾಗೂ ಮಹಾರಾಜ ಕೊಡುಗೆ ಗಳನ್ನು ಸ್ಮರಿಸಿಕೊಳ್ಳಬೇಕು ಎಂದರು.
ಹಿರಿಯ ಸಮಾಜ ಸೇವಕ ಡಾ. ರಘುರಾಂ ಕೆ ವಾಜಪೇಯಿ ಮಾತನಾಡಿ ಮುಮ್ಮಡಿ ರವರು ಇಡೀ ಮೈಸೂರು ಸಂಸ್ಥಾನದ ಪ್ರಖ್ಯಾತ ಅರಸರು ಜೊತೆಗೆ ಇವರು ಸ್ವತಃ ಕವಿ, ಅಲ್ಲದೇ ಅನೇಕ ಕವಿಗಳಿಗೆ ಆಶ್ರಯ ಕೊಟ್ಟು ,” ಕವಿ ಜನ ಕಾಮಧೇನು, ಕನ್ನಡದ ಭೋಜ ” ಎಂಬೆಲ್ಲ ಬಿರುದನ್ನು ಪಡೆದಿದ್ದ ಏಕೈಕ ಮಹಾರಾಜ ಆಗ ಶ್ರೀರಂಗಪಟ್ಟಣ ರಾಜಧಾನಿ ಆಗಿತ್ತು. ಇವರು ಶ್ರೀರಂಗಪಟ್ಟಣದಿಂದ ರಾಜಧಾನಿಯನ್ನು ಮೈಸೂರಿಗೆ ವರ್ಗಾಯಿಸಿದರು, ಮೈಸೂರನ್ನು ರಾಜಧಾನಿ ಯಾಗಿಸಿದರು. ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ಅವರ ಸೇವೆ ಅತ್ಯಂತ ಗಣನೀಯವಾದದ್ದು ಕನ್ನಡ ಸಾಹಿತ್ಯಕ್ಕೆ ಹೆಚ್ಚು ಒತ್ತುರಿಯನ್ನು ಕೊಟ್ಟಿದ್ದರು. ಇಂತಹ ಮಹಾನುಭಾವರ ಜಯಂತಿಯನ್ನು ಕರ್ನಾಟಕ ಸೇನಾ ಪಡೆ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ನಂತರ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ನಾಡಿಗೆ ಅಪಾರ ಹಾಗೂ ಅಭಿವೃದ್ಧಿ ಹರಿಕಾರ, ಮುಮ್ಮಡಿ ರವರ ಜಯಂತಿ ಯನ್ನು ಮುಂದಿನ ವರ್ಷ ದಿಂದಾದರೂ ಸರ್ಕಾರದ ವತಿಯಿಂದ ಆಚರಿಸಬೇಕು. ಅವರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಜಿಲ್ಲಾಡಳಿತ ವತಿಯಿಂದ ಆಗಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ
ಹೆಚ್ ಕೆ ರಾಮು ,ಕಾಂಗ್ರೆಸ್ ಯುವ ಮುಖಂಡರಾದ ನವೀನ್ ಕುಮಾರ್ ಎನ್. ಎಂ,
ಜಿಲ್ಲಾ ಸಾಹಿತ್ಯ ಕನ್ನಡ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್ ಟಿ ರವಿಕುಮಾರ್, ಮಹಾರಾಜ ಕಾಲೇಜು ಪ್ರಾಂಶುಪಾಲ ಉದಯಶಂಕರ್, ಶ್ರೀಧರ್ ರಾಜೇ ಅರಸ್, ಲಯನ್ ಸುರೇಶ್ ಗೋಲ್ಡ್, ಡಾ. ಶಾಂತರಾಜೇ ಅರಸ್, ಕೃಷ್ಣಪ್ಪ, ಪ್ರಜೀಶ್, ಪ್ರಭುಶಂಕರ, ಡಾ. ನರಸಿಂಹೇಗೌಡ, ಎಳನೀರು ರಾಮಣ್ಣ, ದರ್ಶನ್ ಗೌಡ, ಬಂಗಾರಪ್ಪ, ಅಂಬಾ ಅರಸ್, ಅನಿತಾ ಚೇತನ್, ಪದ್ಮಾ, ಸ್ವಾಮಿ, ಗಣೇಶ್ ಪ್ರಸಾದ್, ಪ್ರದೀಪ್, ಅನಂತ್ ಪ್ರಸಾದ್, ಪ್ರಭಾಕರ, ಶ್ರೀನಿವಾಸ, ಕುಮಾರಸ್ವಾಮಿ ಉಪಸ್ಥಿತರಿದ್ದರು.