ಶಾಸಕ ಕೆ.ಹರೀಶ್ ಗೌಡ ಹುಟ್ಟು ಹಬ್ಬ ಮಕ್ಕಳಿಗೆ ಬೇಬಿ ಕಿಟ್ ಹಾಗೂ ಜನ್ಮ ನೀಡಿದ ತಾಯಂದಿರಿಗೆ ಸನ್ಮಾನ

ನಂದಿನಿ ಮೈಸೂರು

ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಹುಟ್ಟು ಹಬ್ಬ ಅಂಗವಾಗಿ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸೇವಾದಳದಿಂದ ಎಂ.ಕೆ.ಅಶೋಕ್ ನೇತೃತ್ವದಲ್ಲಿ ಮಕ್ಕಳಿಗೆ
ಬೇಬಿ ಕಿಟ್ ಹಾಗೂ ಜನ್ಮ ನೀಡಿದ ತಾಯಂದಿರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಜುಲೈ 17 ರ ಮಧ್ಯರಾತ್ರಿ 12 ಗಂಟೆಯಿಂದ ಮಧ್ಯಾಹ್ನ 12 ಗಂಟೆವರಗೆ ಜನಿಸಿದ ಎಲ್ಲಾ ಮಕ್ಕಳಿಗೆ ಶಾಸಕ ಕೆ.ಹರೀಶ್ ಗೌಡ ಬೇಬಿ ಕಿಟ್ ವಿತರಿಸಿ ಬಾಣಂತಿಯರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ
ಆರ್. ಮೂರ್ತಿ,ನಗರ ಪಾಲಿಕೆ ಸದಸ್ಯ ಜೆ.ಗೋಪಿ,ಕೆ.ಗಿರೀಶ್ ಗೌಡ,ಸಮೀರ್ ಅಹಮದ್
ಮೋಹನ್ ಕುಮಾರ್,ನಾಗರತ್ನ,ಸವಿತಾ ರಾಮಚಂದ್ರ,ಎಸ್.ಎನ್.ರಾಜೇಶ್,ಚೈತ್ರ,ಚಿತ್ರ ಸೇರಿದಂತೆ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *