ಶಾಸಕ ಜಿಟಿಡಿ ಪುತ್ರ ಹರೀಶ್ ಗೌಡ ಪುತ್ರಿ ಗೌರಿ ನಿಧನ

 

ಮೈಸೂರು : 15 ಮೇ 2022

ನಂದಿನಿ ಮೈಸೂರು

ಚಾಮುಂ ಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಡಿ. ದೇವೇಗೌಡರ ಮೊಮ್ಮಗಳು ಹಾಗೂ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಅವರ ಪುತ್ರಿ 3 ವರ್ಷದ ಗೌರಿ ಇಂದು ರಾತ್ರಿ ನಿಧನ ಹೊಂದಿದ್ದಾಳೆ. 

ಅನಾರೋಗ್ಯ ನಿಮಿತ್ತ ಬೆಂಗಳೂರಿನ ನಾರಾಯಣ ಹೃದ ಯಾಲಯದಲ್ಲಿ ದಾಖಲು ಮಾಡ ಲಾಗಿದ್ದ ಗೌರಿ ಚೇತರಿಸಿಕೊಂಡಿದ್ದಳು . ಆದರೆ ಇಂದು ಮಧ್ಯಾಹ್ನ ಇದ್ದಕ್ಕಿ ದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ರಾತ್ರಿ 12.30 ರ ವೇಳೆಗೆ ನಿಧನ ಹೊಂದಿದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ .

( ಭಾನುವಾರ ) ಪಾರ್ಥಿವ ಶರೀರವನ್ನು ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರದ ಜಿ.ಟಿ.ದೇವೇಗೌಡರ ಮನೆಗೆ ತರಲಾಗುತ್ತಿದ್ದು , ಮಧ್ಯಾಹ್ನ 12 ಗಂಟೆ ವೇಳೆಗೆ ಗೌಡರ ತೋಟದಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ ಎಂದು ತಿಳಿಸಲಾಗಿದೆ .

 

            ಅಜ್ಜ ಶಾಸಕ ಜಿಟಿದೇವೇಗೌಡ ಜೊತೆ ಗೌರಿ
                     ತಂದೆ ಹರೀಶ್ ಗೌಡ ಜೊತೆ ಗೌರಿ

 

Leave a Reply

Your email address will not be published. Required fields are marked *