ನಟನೆ ನೀಲಿ ಚಿತ್ರವಾದರೇನು ವೈಯಕ್ತಿಕ ಜೀವನದಲ್ಲಿ ಅನಾಥ ಮಕ್ಕಳ ತಾಯಿ ಸನ್ನಿಲಿಯೋನ್ ಹುಟ್ಟುಹಬ್ಬ ಆಚರಿಸಿದ ಮಂಡ್ಯ ಹೈಕ್ಳು

113 Views

ಮಂಡ್ಯ:14 ಮೇ 2022

ನಂದಿನಿ ಮೈಸೂರು

ಅನಾಥ ಮಕ್ಕಳ ತಾಯಿ ಆಕೆ.ಅಭಿಮಾನಿಗಳ ಮನಸ್ಸಿನಲ್ಲಿ ನೆಲಸಿರುವ ದೇವತೆ.ನಟನೆ ನೀಲಿ ಚಿತ್ರವಾದರೂ ಆಕೆಯ ವೈಯಕ್ತಿಕ ಜೀವನ ಇತರರಿಗೆ ಮಾದರಿ.ನೀಲಿ ಚಿತ್ರದ ಮಾದಕ ನಟಿ ಎಂದೇ ಖ್ಯಾತಿ
ಪಡೆದಿರೋ ಬಾಲಿವುಡ್ ನಟಿ ಸನ್ನಿಲಿಯೋನ್ 43ನೇ ವಸಂತಕ್ಕೆ ಕಾಲಿಟ್ಟಿದ್ದು.ಅಭಿಮಾನಿಗಳು ಸಮಾಜ ಸೇವಾ ಕಾರ್ಯಕ್ರಮ ಮೂಲಕ ತಮ್ಮ ನೆಚ್ಚಿನ ನಟಿ ಹುಟ್ಟುಹಬ್ಬವನ್ನು ಸಕ್ಕರೆ ನಾಡಿನ ಯುವಕರು ಅದ್ದೂರಿಯಾಗಿ‌ ಅರ್ಥ ಪೂರ್ಣವಾಗಿ ಆಚರಿಸಿದ್ದಾರೆ.

ಮಂಡ್ಯದ ಸನ್ನಿ ಲಿಯೋನ್ ಅಭಿಮಾನಿ ಗಳ ಸಂಘದ ಸದಸ್ಯರು, ಮಂಡ್ಯ ತಾಲೂಕಿನ ಕೊಮ್ಮೇರ ಹಳ್ಳಿಯ ಹೆಬ್ಬಾಗಿಲಲ್ಲಿ 20ಅಡಿಗೂ ಉದ್ದ ದ ಸನ್ನಿಲಿಯೋನ್ ಬ್ಯಾನರ್ ಅಳವಡಿಸಿದ್ರೂ.
ಬಡಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು
ಬಣ್ಣಿಸಿದ್ರೂ‌.

ಅಭಿಮಾನಿ ಗಳು,ರಕ್ತದಾನ ಶಿಬಿರ ಹಾಗೂ ಬಾಡೂಟ ಆಯೋಜನೆ ಮಾಡಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿ ಕೇಕ್​ ಕತ್ತರಿಸಿ ಸನ್ನಿಲಿಯೋನ್ ಹುಟ್ಟು ಹಬ್ಬವನ್ನು ಸಂಭ್ರಮಿಸಿದ್ದಾರೆ. 

ಇನ್ನು ಬಾಲಿವುಡ್​ ನಟಿ ಸನ್ನಿ ಲಿಯೋನ್ ನ ಅಪ್ಪಟ ಅಭಿಮಾನಿಯಾಗಿರೋ ಮಂಡ್ಯದ ನೂರಡಿ‌ ರಸ್ತೆಯಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿರೋ ಪ್ರಸಾದ್ ಕೂಡ ಇಂದು ತನ್ನ
ನೆಚ್ಚಿನ ನಟಿ ಸನ್ನಿ ಲಿಯೋನ್ ಬರ್ತ್ ಡೇ ಯನ್ನು‌ ಅದ್ದೂರಿಯಾಗಿ ಆಚರಿಸಿದ್ದಾರೆ.ತಮ್ಮ ಅಂಗಡಿ ಮುಂದೆ ಅಭಿ ಮಾನಿಗಳ ಕೇಕ್ ಕತ್ತರಿಸಿ, ಬಂದ ಜನರಿಗೆ ಬಿರಿಯಾನಿ ವಿತರಣೆ ಮಾಡಿ ಸಂಭ್ರಮಿಸಿದ್ದಾರೆ.ಅಲ್ಲದೇ ಸನ್ನಿ ಲಿಯೋ ನ್ ಅಭಿಮಾನಿಗಳಿಗೆ 10% ರಿಯಾಯಿತಿಯಲ್ಲಿ ಚಿಕನ್​ ನೀಡಿದ್ದಾರೆ. ಈ ಹಿಂದೆ ಸನ್ನಿ ಲಿಯೋನ್​ ಅಭಿಮಾನಿಗಳಿಗೆ ಮೂರು ಷರತ್ತು ವಿಧಿಸಿ ತನ್ನ ಡಿ.ಕೆ ಚಿಕನ್ ಸೆಂಟರ್​ನಿಂದ ಸ್ಪೆಷಲ್ ಆಫರ್ ನೀಡಿ ಸುದ್ದಿಯಾಗಿದ್ದ ಈ ಪ್ರಸಾದ್,​ಇಂ ದು ಬಿರಿಯಾನಿ ವಿತರಿಸುವ ಮೂಲಕ ನೆಚ್ಚಿನ ನಟಿಯ ಹುಟ್ಟುಹಬ್ಬ ಆಚರಿಸಿದ್ದಾರೆ.

 

Leave a Reply

Your email address will not be published.