ಸತೀಶ್ ಆರಾಧ್ಯ/ನಂದಿನಿ ಮೈಸೂರು
ಪಿರಿಯಾಪಟ್ಟಣ ತಾಲ್ಲೂಕಿನ ಬೆಕ್ಕರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ 2021-22 ನೇ ಸಾಲಿನಲ್ಲಿ 5.25 ಲಕ್ಷ ನಿವ್ವಳ ಲಾಭ ಗಳಿಸಿದೆ.
ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿದ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಮಾತನಾಡಿ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪಕಸುಬನ್ನಾಗಿ ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವಂತೆ ಕೋರಿ ಸಹಕಾರ ಸಂಘದಲ್ಲಿ ದೊರೆಯುವ ಸಬ್ಸಿಡಿ ದರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ವಿಸ್ತರಣಾಧಿಕಾರಿ ಶ್ರೀಕಾಂತ್ ಅವರು ವಾರ್ಷಿಕ ವರದಿ ಮಂಡಿಸಿದರು, ಈ ವೇಳೆ ಸಹಕಾರ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಷೇರುದಾರರಾದ ಅಶ್ವತ್ಥ್, ಶಶಿಧರ್, ಲಕ್ಷ್ಮಮ್ಮ, ಅಣ್ಣೇಗೌಡ, ಕೃಷ್ಣೇಗೌಡ ಅವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಮೈಮುಲ್ ನಿರ್ದೇಶಕ ಹೆಚ್.ಡಿ ರಾಜೇಂದ್ರ, ಸಂಘದ ಅಧ್ಯಕ್ಷ ಬಿ.ಪಿ ನಾಗೇಶ್, ಉಪಾಧ್ಯಕ್ಷ ಬಿ.ಆರ್ ಸೋಮೇಗೌಡ, ನಿರ್ದೇಶಕರಾದ ಬಿ.ಬಿ ರವಿ, ಬಿ.ಎಸ್ ಸುರೇಶ್, ಬಿ.ವಿ ಬಸವರಾಜು, ಬಿ.ಎ ರಮೇಶ್ ಗೌಡ, ರುಕ್ಮಾಂಗದಾಚಾರ್, ಸೋಮಣ್ಣ, ಮೋಹನ್ ರಾಜೇಅರಸ್, ತಮ್ಮಯ್ಯ, ರುಕ್ಮಿಣಿ, ಪ್ರೇಮ, ಸಿಇಒ ಬಿ.ಬಿ ಸುರೇಶ್, ಸಿಬ್ಬಂದಿ ರವಿ, ಮಧುರಾಜೇ ಅರಸ್, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರು ಇದ್ದರು..