ಮೈಸೂರು:8 ಸೆಪ್ಟೆಂಬರ್ 2022
ನಂದಿನಿ ಮೈಸೂರು
ನಾನು ಮೇಯರ್ ಸ್ಥಾನದ ಆಕಾಂಕ್ಷಿಯಲ್ಲ.
ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಮೇಯರ್ ಸ್ಥಾನವನ್ನು ಬಿಜೆಪಿ ಪಕ್ಷ ನಾಯಕ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟಿದ್ದು ನನಗೆ ಹಾಗೂ ಸಮುದಾಯಕ್ಕೆ ಖುಷಿ ತಂದುಕೊಟ್ಟಿದೆ ಎಂದು ನೂತನ ಮೇಯರ್ ಶಿವಕುಮಾರ್ ಮನಬಿಚ್ಚಿ ಮಾತನಾಡಿದರು.
ಮೈಸೂರು ಮಹಾನಗರ ಪಾಲಿಕೆಯ 24ನೇ ಮೇಯರ್ ಶಿವಕುಮಾರ್
ನಾನು ಹುಟ್ಟಿ, ಬೆಳೆದ ಸುಣ್ಣಕೇರಿಯಲ್ಲಿ ೨ ಬಾರಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಅಲ್ಲಿ ನನ್ನದೇ ಜನರಿದ್ದಾರೆ. ಅಲ್ಲಿನ ಜನರ ಪ್ರೀತಿ-ವಿಶ್ವಾಸ ಗಳಿಸಿದ್ದೇನೆ.ಮೂರನೇ ಬಾರಿಗೆ ೪೭ನೇ ವಾರ್ಡಿನಲ್ಲಿ ಸ್ಪರ್ಧಿಸಿದಾಗ ನನ್ನ ಸ್ನೇಹಿತರ ಬಳಗ, ಹಿತೈಷಿಗಳು ಸ್ವಯಂ ಪ್ರೇರಿತವಾಗಿ ಜನರಿಗೆ ಮತ ನೀಡುವಂತೆ ಕೋರಿದ್ದಾರೆ.ಜನ ಮತ ನೀಡಿ ಗೆಲ್ಲಿಸಿದ್ದಾರೆ.ಪಾಲಿಕೆ ಸದಸ್ಯರು ನಮ್ಮ ಮೇಲಿದ್ದ ವಿಶ್ವಾಸದಿಂದ ಮತ ನೀಡಿದ್ದಾರೆ.ಮೈಸೂರು ಮಹಾನಗರ ಪಾಲಿಕೆಯ ೨೪ನೇ ಮೇಯರ್ ಆಗಿ ಆಯ್ಕೆಯಾಗಿದ್ದೀನಿ.
ರಸ್ತೆ ಗುಂಡಿ ನೋಡಿ ಜನ ಹೈರಾಣ
ನಾಡ ಹಬ್ಬ ದಸರಾ ಆಗಮಿಸುತ್ತಿದೆ.ರಸ್ತೆಗಳು ಗುಂಡಿ ಬಿದ್ದಿದೆ.ನಿರಂತರ ಮಳೆಯಿಂದ ಹದಗೆಟ್ಟಿರುವ ರಸ್ತೆ-ಚರಂಡಿಗಳು ಸಮಸ ನಿವಾರಿಸಲು ಸಾಧ್ಯವಾಗುತ್ತಿಲ್ಲ.ಮಳೆಯ ಹವಾಮಾನ ನೋಡಿಕೊಂಡು ಅಧಿಕಾರಿಗಳು ಸಭೆ ಕರೆದು ಚರ್ಚಿಸಿ ಆದಷ್ಟು ಬೇಗ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ಥಿ ಕಾರ್ಯಕ್ಕೆ ಕೂಡಲೇ ಚಾಲನೆ ನೀಡಲಾಗುವುದು. ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಕೆಲಸ ಮಾಡಲು ಪ್ರಯತ್ನಿಸುವೆ.
ಸಿಬ್ಬಂದಿ ಕರೆ ಸ್ವೀಕರಿಸಲ್ಲ ಯಾಕೆ?
ತುರ್ತು ಸಮಸ್ಯೆ ಸ್ಪಂದನೆಗಾಗಿ ಪಾಲಿಕೆಯಲ್ಲಿ ಸಹಾಯವಾಣಿ ಇದೆ.ಆದರೇ ಸಮಸ್ಯೆ ಪರಿಹಾರಕ್ಕಾಗಿ ದೂರು ನೀಡಲು ಎಷ್ಟು ದೂರವಾಣಿ ಕರೆ ಮಾಡಿದರೇ ಸಿಬ್ಬಂದಿಗಳು ಕರೆ ಸ್ವೀಕರಿಸುತ್ತಿಲ್ಲ ಎಂಬ ಸಾರ್ವಜನಿಕರು ಹೇಳಿದ್ದಾರೆ ನನ್ನ ಗಮನಕ್ಕೂ ಬಂದಿದೆ.ಏನಾಗಿದೆ ಎಂಬುದರ ಬಗ್ಗೆ ಅಧಿಕಾರಿ ಹಾಗೂ ಸಂಬಂಧಪಟ್ಟ ಸಿಬ್ಬಂದಿಗಳ ಬಳಿ ಮಾತನಾಡುತ್ತೇನೆ ಎಂದರು.
ನನಗೆ ನಿರೀಕ್ಷೇ ಇತ್ತಾ?
ನಾನು ಮೇಯರ್ ಸ್ಥಾನದ ಆಕಾಂಕ್ಷಿಯೂ ಅಲ್ಲ, ನಿರೀಕ್ಷೆಯನ್ನೂ ಹೊಂದಿರಲಿಲ್ಲ.
ಅನಿರೀಕ್ಷಿತವಾಗಿ ಮೇಯರ್ ಸ್ಥಾನ ಲಭಿಸಿದೆ.
ಮೊದಲನೆಯದಾಗಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಇದರ ನಡುವೆಯೂ ಎಸ್ಟಿ ಸಮುದಾಯದ ಒಬ್ಬ ಸದಸ್ಯನಿಗೆ ಮೇಯರ್ ಸ್ಥಾನ ನೀಡಿದ್ದು ಭಾರತೀಯ ಜನತಾ ಪಾರ್ಟಿ. ಬೇರೆ ಯಾವುದೇ ಪಕ್ಷದಲ್ಲಿಯೂ ಈ ರೀತಿಯ ಅವಕಾಶ ದೊರೆಯುವುದಿಲ್ಲ. ಅದಕ್ಕೆ ನನ್ನ ಪಕ್ಷ, ನಾಯಕರಿಗೆ ಚಿರಋಣಿ. ಅವರ ನಂಬಿಕೆಯಂತೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಮೈಸೂರು ಅಭಿವೃದ್ಧಿ ಮಾಡುವುದಕ್ಕೆ ಎಲ್ಲಾರೀತಿ ಪ್ರಯತ್ನ ಮಾಡುತ್ತೇನೆ.ಮೈಸೂರಿನ ಜನರ ಸಹಕಾರಕ್ಕೆ ಮನವಿ ಮಾಡುತ್ತೇನೆ ಎಂದರು.