ಭುವನಹಳ್ಳಿ ಗ್ರಾಮದ ಪಿಎಸಿಸಿಎಸ್ 2021-22 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ

ಪಿರಿಯಾಪಟ್ಟಣ

ಸತೀಶ್ ಆರಾಧ್ಯ/ನಂದಿನಿ ಮೈಸೂರು

ಸಹಕಾರ ಸಂಘಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಲಿದ್ದು ಷೇರುದಾರರು ಸದುಪಯೋಗಪಡಿಸಿಕೊಳ್ಳುವಂತೆ ಭುವನಹಳ್ಳಿ ಪಿಎಸಿಸಿಎಸ್ ಅಧ್ಯಕ್ಷ ಬಿ.ಎನ್ ಹರೀಶ್ ಹೇಳಿದರು.

ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಪಿಎಸಿಸಿಎಸ್ 2021-22 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು, ಷೇರುದಾರರು ಸಂಘದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸಕಾಲಕ್ಕೆ ಸಾಲ ಮರುಪಾವತಿಸಿ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.

ಸಿಇಒ ಬಿ.ಪಿ ಸತೀಶ್ ಅವರು ವಾರ್ಷಿಕ ವರದಿ ಮಂಡಿಸಿ 2021-22 ನೇ ಸಾಲಿನಲ್ಲಿ ಸಂಘವು ನಿವ್ವಳ 9.73 ಲಕ್ಷ ಲಾಭ ಗಳಿಸಿದೆ ಎಂದರು.

ಸಹಕಾರ ಬ್ಯಾಂಕ್ ಪ್ರತಿನಿಧಿ ವೈ.ಎಸ್ ಶಿವಕುಮಾರ್ ಅವರು ಸಹಕಾರ ಸಂಘದಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದ ನಿರ್ದೇಶಕ ಬಿ.ವಿ ಗಿರೀಶ್ ಹಾಗು ಯಜಮಾನರಾದ ಈಶ್ವರಯ್ಯ ಮತನಾಡಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ವೆಂಕಟರಮಣಶೆಟ್ಟಿ, ನಿರ್ದೇಶಕರಾದ ಸಿ.ಮಲ್ಲೇಶ, ಜೆ.ಎ ಜಯಣ್ಣ, ಮಹದೇವ, 

ಬಿ.ಆರ್ ಲೋಹಿತ್, ಲಕ್ಷ್ಮೀ, ಗೌರಮ್ಮ, ಬಿ.ಎಸ್ ವಿಜೇಂದ್ರ, ಬೋರಪ್ಪ, ಬೇಲೂರಯ್ಯ, ಗ್ರಾ.ಪಂ ಸದಸ್ಯರಾದ ದೇವರಾಜ್, ಬಸವರಾಜು, ಸಿಬ್ಬಂದಿ ಬಿ.ಪಿ ರಾಜಶೇಖರ್, ಬಿ.ಟಿ ವೆಂಕಟೇಶ, ಬಿ.ಸಿ ಸಂತೋಷ ಮಾಜಿ ಅಧ್ಯಕ್ಷರಾದ ಬಿ.ಕೆ ಲೋಕೇಶ್, ಬಿ.ಎಂ ಕುಮಾರ್, ಮುಖಂಡರಾದ ಪಟೇಲ್ ರಾಜೇಗೌಡ್ರು, ಬಿ.ಎಸ್ ಜಯಣ್ಣ, ಯಜಮಾನ್ ವೆಂಕಟೇಶ್, ರಾಮಶೆಟ್ಟಿ, ರಾಜಗೋಪಾಲ್, ಮಣಿಕುಮಾರ್, ಪ್ರಕಾಶ್, ದಿನೇಶ್, ರಾಜೇಂದ್ರ, ಕಾಂತರಾಜು, ಸೋಮೇಗೌಡ, ಶಿವಬಸಪ್ಪ, ಚಂದ್ರು, ಷೇರುದಾರರು ಹಾಗು ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *