ನಂದಿನಿ ಮೈಸೂರು
ಜನರ ಉತ್ತಮ ಆರೋಗ್ಯಕ್ಕಾಗಿ 24 ಗಂಟೆ ಕಾಲ ಸೇವೆ ನೀಡುತ್ತಾ ಬಂದಿದ್ದು ಮತ್ತಷ್ಟು ಸೇವೆ ಸಲ್ಲಿಸಲು ಹೊಸ ನವೀಕರಣದೊಂದಿಗೆ ಮೌರ್ಯ ಆಸ್ಪತ್ರೆ ಸಿದ್ದವಾಗಿದೆ ಎಂದು ಮೌರ್ಯ ಆಸ್ಪತ್ರೆ ಚೇರ್ಮೇನ್ ಜೆಜೆ ಆನಂದ್ ಮಾಹಿತಿ ನೀಡಿದರು.
![](https://bharathnewstv.in/wp-content/uploads/2025/01/OPENING-TODAY.jpg)
ಮೈಸೂರಿನ ಟಿಕೆ ಬಡವಾಣೆಯಲ್ಲಿರುವ ಮೌರ್ಯ ಆಸ್ಪತ್ರೆ ಆವರಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಆಸ್ಪತ್ರೆ 6 ವರ್ಷದಿಂದ ಸೇವೆ ಸಲ್ಲಿಸುತ್ತಿದೆ. ರೋಗಿಗಳ ಆರೈಕೆಯಲ್ಲಿ ತೊಡಿಗಿದೆ.ನುರಿತ ವೈದ್ಯ ವೃಂದ,ನರ್ಸ್ ಹಾಗೂ ಸೆಕ್ಯುರಿಟಿಗಳಿದ್ದಾರೆ.
ಐದು ಮಹಡಿಯ ಆಸ್ಪತ್ರೆ ಇದಾಗಿದ್ದು 200 ಹಾಸಿಗೆ ವ್ಯವಸ್ಥೆ ಇದೆ.ಅದಲ್ಲದೇ
200 ಜನ ಅಡೆಂಡರಿಗೂ ಮಲಗಲು ಅವಕಾಶ ಮಾಡಿಕೊಡಲಾಗಿದೆ.ಕೊರೋನಾ ಸಂದರ್ಭದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿದ್ದೇವೆ.ಒಂದು ಸಾವಿರ ಆಪರೇಷನ್ ಯಶಸ್ವಿಯಾಗಿದೆ.
ರೋಗಿಗಳ ಉತ್ತಮ ಆರೋಗ್ಯಕ್ಕಾಗಿ ಆಸ್ಪತ್ರೆ ಅತ್ಯವಶ್ಯಕವಾಗಿದೆ.ಮೌರ್ಯ ಆಸ್ಪತ್ರೆ ಹೊಸ ನವೀಕರಣದೊಂದಿಗೆ ವಿಸ್ತಾರವಾಗಿದೆ. ಮಾ.6 ರಂದು ಮಾಜಿ ಸಿಎಂ ಸಿದ್ದರಾಮಯ್ಯರವರು ಮೌರ್ಯ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ,ಸುನೀಲ್ ಬೋಸ್, ಎಂ.ಕೆ.ಸೋಮಶೇಖರ್ ,ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ.
ರೋಗಿಗಳ ಆರೈಕೆ ಅಲ್ಲದೇ ಸ್ಥಳೀಯರಿಗೆ ಉದ್ಯೋಗವಕಾಶ ನೀಡುತ್ತಿದ್ದೇವೆ.ಮುಂದಿನ ದಿನಗಳಲ್ಲಿ ನರ್ಸಿಂಗ್ ತರಬೇತಿ ಆರಂಭಿಸಲು ಚಿಂತಿಸಿದ್ದೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ
ಸಮಾಜ ಸೇವಕ ಬೋರೇಗೌಡ,ನಜರ್ ಬಾದ್ ನಟರಾಜ್,ಸಮಾಜಸೇವಕ
ಬಸವರಾಜು .ಎಂ.ಫೋಟೋಗ್ರಾಫರ್ ಉಮೇಶ್ ಹಾಜರಿದ್ದರು.