ನಂದಿನಿ ಮೈಸೂರು
ಮುಂಬರುವ 2023 ವಿಧಾನ ಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಆಕಾಂಕ್ಷಿಯಾಗಿದ್ದೇನೆ ಪಕ್ಷದ ವರಿಷ್ಠರು ನನಗೆ ಟಿಕೇಟ್ ನೀಡುವಂತೆ ಕಾಂಗ್ರೇಸ್ ಮುಖಂಡ ಮೆಲ್ಲಹಳ್ಳಿ ಮಹದೇವಸ್ವಾಮಿ ಮನವಿ ಮಾಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಹಲವಾರು ಚುನಾವಣೆಗಳನ್ನು ಎದುರಿಸಿದ್ದು ಕ್ಷೇತ್ರಾದ್ಯಂತ ಅತೀ ಹೆಚ್ಚು ಚಿರಪರಿಚಿತನಾಗಿರುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರವು ರಾಜ್ಯದಲ್ಲಿ ಪ್ರತಿಷ್ಠಿತ ಕ್ಷೇತ್ರವಾಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ ಇದಾಗಿದೆ. ೨೦೨೩ನೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವಾರು ಮಂದಿ ನನ್ನ ಸ್ನೇಹಿತರು ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ, ಸಿದ್ದರಾಮಯ್ಯ ಅವರ ಸೂಚನೆಗಾಗಿ ಕಾಯುತ್ತಿದ್ದಾರೆ.ಈಗ ಪಕ್ಷಕ್ಕೆ ಸೇರಿದವರಿಗೆ ಟಿಕೇಟ್ ನೀಡುವುದು ಸರಿಯಲ್ಲ. ತಾವು ಹಲವಾರು ವರ್ಷಗಳಿಂದ ಪಕ್ಷದಲ್ಲಿಯೇ ಇದ್ದು, ಸೇವೆ ಮಾಡುತ್ತಿರುವ ಕಾರಣ ತಮಗೆ ಟಿಕೆಟ್ ನೀಡಬೇಕು.ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಬಿ ಫಾರಂ ನೀಡಿದ್ದೇ ಆದ್ದಲ್ಲಿ ಜಿಟಿ ದೇವೇಗೌಡರನ್ನ ಚುನಾವಣೆಯಲ್ಲಿ ಸೋಲಿಸುವುದಾಗಿ ಭರವಸೆ ನೀಡಿದರು.