ಮೈಸೂರು:8 ಅಕ್ಟೋಬರ್ 2021
ನ@ದಿನಿ
ಬಣ್ಣ ಬಣ್ಣದ ಮೀನು,ಪುಟಾಣಿ ಮೀನಿನಿಂದ ಹಿಡಿದು ಗಾತ್ರದ ಮೀನುಗಳನ್ನು ನೋಡಬಹುದು.ಒಮ್ಮೆಲೇ ಸಾಮಾನ್ಯವಾಗಿ ಮೀನುಗಳನ್ನ ನೋಡೋಕಾಗೋದಿಲ್ಲ.ಒಂದೇ ಸೂರಿನಡಿ ಬರೀ ವಿವಿಧ ಬಗ್ಗೆ ಮೀನುಗಳನ್ನು ನೋಡೋಕೆ ಮತ್ಸ್ಯ ಲೋಕ ಸಾಂಸ್ಕೃತಿಕ ನಗರೀಗೆ ಎಂಟ್ರಿ ಕೊಟ್ಟಿದೆ. ಆ ಮತ್ಸ್ಯ ಲೋಕವನ್ನೊಮ್ಮೆ ಸುತ್ತಿ ಬರೋಣ ಬನ್ನಿ.
ಮೈಸೂರಿನ ಮೃಗಾಲಯದ ಸಮೀಪ ಲೋಕರಂಜನ್ ಆಕ್ವಾ ವರ್ಲ್ಡ್ ವತಿಯಿಂದ ನಿರ್ಮಾಣವಾಗಿರುವ ಅಂಡರ್ ವಾಟರ್ ಸಫಾರಿಗೊಮ್ಮೆ ಭೇಟಿ ಕೊಡಿ. ಮಕ್ಕಳೊಂದಿಗೆ ಕುಟುಂಬ ಸಮೇತ 45 ನಿಮಿಷ ಕಾಲ ಕಳೆಯಲು ಪ್ರಶಸ್ತ್ಯ ಸ್ಥಳವಾಗಿದೆ.
4.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮತ್ಸ್ಯ ಲೋಕ ರಾಜ್ಯದ ಮೊದಲ ಬೃಹತ್ ಮತ್ಸ್ಯ ಕೇಂದ್ರ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಿಟ್ಟರೆ ಕರ್ನಾಟಕದಲ್ಲಿ ಮೈಸೂರಿನಲ್ಲಿ ಮಾತ್ರ ಈ ರೀತಿಯ ಮತ್ಸ್ಯ ಲೋಕ ಇರುವುದು ಮತ್ತೊಂದು ವಿಶೇಷ.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ರವರು ಟೇಪ್ ಕತ್ತರಿಸಿ ದೀಪ ಬೆಳಗುವ ಮೂಲಕ ಮತ್ಸ್ಯ ಲೋಕಕ್ಕೆ ಚಾಲನೆ ನೀಡಿದರು. ನಂತರ ಒಳಗೆ ಒಂದು ಸುತ್ತು ಓಡಾಡಿ ಮತ್ಸ್ಯಲೋಕವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.
ಸುಮಾರು 80 ಬಗೆಯ ವಿವಿಧ ಮೀನುಗಳ ಪ್ರಬೇಧಗಳನ್ನು ಇಲ್ಲಿ ಕಾಣಬಹುದು. ವಿವಿಧ ದೇಶ ಹಾಗೂ ರಾಜ್ಯಗಳ ಬೃಹತ್ ಮತ್ಸ್ಯಗಳನ್ನು ಕಣ್ತುಂಬಿಕೊಳ್ಳಬಹುದು.
ಅಕ್ವೇರಿಯಂ ವೀಕ್ಷಣೆಗೆ ವಯಸ್ಕರಿಗೆ 99 ರೂ. ಮಕ್ಕಳಿಗೆ 69 ರೂ. ದರ ನಿಗದಿಪಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಾರ್ವಜನಿಕರು ಭೇಟಿ ನೀಡಬಹುದು.