ಅರಮನೆಯಲ್ಲಿ ಮಹಾಪೌರರಿಗೆ ಅವಮಾನ,ಮಾಧ್ಯಮ ಗ್ಯಾಲರಿಯಲ್ಲಿ ಕಾರ್ಯಕ್ರಮ ವೀಕ್ಷಿಸಿ ಬೇಸರಗೊಂಡು ಹೊರಟ ಮೇಯರ್

 

ಮೈಸೂರು:8 ಅಕ್ಟೋಬರ್ 2021

ನ@ದಿನಿ

                    ನಾಡ ಹಬ್ಬ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಮೈಸೂರಿನ ಪ್ರಥಮ ಪ್ರಜೆ ಸುನಂದ ಪಾಲನೇತ್ರರವರಿಗೆ
ಅರಮನೆಯಲ್ಲಿ ಅವಮಾನವಾಗಿದೆ.

                   ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ ಅವರನ್ನ ಜಿಲ್ಲಾಡಳಿತ ಕಡೆಗಣಿಸಿರುವುದು ಕಂಡು ಬಂದಿದೆ.

                   ಅರಮನೆಯ ಆವರಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ ಮೇಯರ್ ಗೆ ಕೊನೆಯ ಕುರ್ಚಿ ಮೀಸಲಿಟ್ಟ ಹಿನ್ನೆಲೆ ಬೇಸರಗೊಂಡ ಮೇಯರ್ ಸುನಂದ ಪಾಲನೇತ್ರ ಮಾಧ್ಯಮದವರ ಗ್ಯಾಲರಿಯಲ್ಲಿ ಕುಳಿತು ವೀಕ್ಷಣೆ ಮಾಡಿದರು.ಸುಮಾರು ಅರ್ಧ ಗಂಟೆ ಮಾಧ್ಯಮದ ಗ್ಯಾಲರಿಯಲ್ಲಿ ಕುಳಿತಿದ್ದರು ಸಹ ಅಧಿಕಾರಿಗಳು ಬರಲಿಲ್ಲ.ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರವರರು ಆಗಮಿಸಿದ್ದರೂ ಸಹ ಬೇಸರಗೊಂಡ ಮೇಯರ್ ಕಾರಿನಲ್ಲಿ ಹೊರಟೆ ಬಿಟ್ಟರು.

                     ಪ್ರೋಟೋ ಕಾಲ್ ನಲ್ಲಿ ಇಲ್ಲದವರು ವಿವಿಐಪಿ ವೇದಿಕೆಗೆ ಅಗಮಿಸಿದ್ದರಿಂದ ಮೇಯರ್ ಜಾಗವಿರಲಿಲ್ಲ .ಬಿಜೆಪಿ ಮುಖಂಡರು ವಿವಿಐಪಿ ಜಾಗದಲ್ಲಿ ಕುಳಿತಿರುವುದು ಕಂಡು ಬಂತು.
ಈ ಮೂಲಕ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಮೈಸೂರಿನ ಮೊದಲ ಪ್ರಜೆಗೆ ಅವಮಾನ ಮಾಡಿದೆ.

Leave a Reply

Your email address will not be published. Required fields are marked *