ಮೈಸೂರು:16 ಜೂನ್ 2022
ನಂದಿನಿ ಮೈಸೂರು
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಹೆಚ್.ಕೆ.ರಾಮು ಕಾರಣವಲ್ಲ ,ಇದು ಜೆಡಿಎಸ್ ಪಕ್ಷದ ವರಿಷ್ಠರ ಸೋಲು ಎಂದು ಮರಿತಿಬ್ಬೇಗೌಡರು ತಿಳಿಸಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ಉದ್ಧೆಶಿಸಿ ಮಾತನಾಡಿದ ಅವರು
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡರನ್ನ ಜಯ ಶೀಲರನ್ನಾಗಿ ಮಾಡಿದ ಎಲ್ಲಾ ಪದವೀಧರರಿಗೆ ಆತ್ಮೀಯವಾದ ಧನ್ಯವಾದ ತಿಳಿಸುತ್ತಿದ್ದೇನೆ .
ಪ್ರಜ್ಞಾವಂತ ಮತದಾರರು ಸರಿಯಾದ ವ್ಯಕ್ತಿಗೆ ಬೆಂಬಲಿಸಿದ್ದಾರೆ ಎಂದರು.
ಜೆಡಿಎಸ್ ಅಭ್ಯರ್ಥಿ ರಾಮು ಈ ಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ.
ಅತೀ ಶ್ರೀಮಂತ ಅಭ್ಯರ್ಥಿ ರಾಮುವಿಗೆ ಪದವೀಧರರು ಸೋಲಿನ ಬಿಸಿ ತೋರಿಸಿದ್ದಾರೆ.
ಮಧು ಜಿ ಮಾದೇಗೌಡರ
ಗೆಲುವಿಗೆ ಮರಿತಿಬ್ಬೇಗೌಡ ಪಾತ್ರ ಏನು ಎಂಬ ಸುದ್ದಿಗಾರರ ಪ್ರಶ್ನೇಗೆ ಉತ್ತರಿಸಿದ ಅವರು ಪಕ್ಷಕ್ಕಾಗಿ ದುಡಿದ ಜಯರಾಂ ಗೆ ಟಿಕೇಟ್ ಕೊಡಲಿಲ್ಲ..ಕಾವೇರಿ ನೀರಿಗಾಗಿ ಹೋರಾಟ ನಡೆಸಿದ ಮಾದೇಗೌಡರ ಪುತ್ರ ಮಧು ರವರ ಗೆಲುವಿಗೆ ಸಹಕರಿಸಿದ್ದೇವೆ.ಹೆಚ್.ಕೆ.
ರಾಮು ಟಿಕೇಟ್ ತೆಗೆದುಕೊಂಡಿದ್ದು,
ವರಿಷ್ಟರು ಟಿಕೇಟ್ ಕೊಟ್ಟಿದ್ದು ನನಗೆ ಬೇಸರ ತಂದಿದೆ ಎಂದರು.
ನಾನು ಪ್ರಸ್ತುತ ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ. ಆದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಥಿಸೋದಿಲ್ಲ ಎಂದು ಮರಿತಿಬ್ಬೇಗೌಡ ತಮ್ಮ ನಡೆ ಸ್ಪಷ್ಟಪಡಿಸಿದರು.
ಮಧು ಜಿ ಮಾದೇಗೌಡ ಕೃತಜ್ಞತೆ ತಿಳಿಸಿರುವ ವಿಚಾರ .ಮಧು ರವರು ನಮ್ಮನ್ನ ಎಂದಿಗೂ ಭೇಟಿ ಮಾಡಲಿಲ್ಲ.ನಾವೇ ಮಧುರವರಿಗೆ ಬೆಂಬಲಿಸಿದ್ದೇವು.
ಮಂಡ್ಯದಿಂದ ಸಭೆ ಆರಂಭಿಸಿದ್ದೇವೆ.ಎಲ್ಲಾ ಪದವೀಧರರು ಮತ ಹಾಕಿ ಗೆಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಕೆಲವು ಹಿನ್ನೆಡೆ ಆಗುತ್ತಿರುವುದಕ್ಕೆ ಪಕ್ಷದ ಸಂಘಟನೆ, ಪಕ್ಷದ ಕಾರ್ಯಕರ್ತರ ಪರಿಗಣಿಸದೇ ಇರುವುದು ಕಾರಣವಾಗುತ್ತದೆ. ಹೀಗಾಗಿ ವರಿಷ್ಠರು ಕಾರ್ಯ ಕರ್ತರ ಸಮಸ್ಯೆಯನ್ನು ಆಲಿಸುವ ಕೆಲಸ ಮಾಡಬೇಕಿದೆ.
ಏಪ್ರಿಲ್ 5 ರಂದು ಸಭೆ ಮಾಡಿದ್ದು, ಬಿಟ್ಟರೆ ಇದುವರೆಗೂ ಪಕ್ಷದ ಯಾರೊಬ್ಬರೂ ಸಂಪರ್ಕಿಸಿಲ್ಲ.
1994 ರಲ್ಲಿ ಕಾಂಗ್ರೆಸ್ ನಿಂದ ಶಾಸಕ ನಾಗಿದ್ದೆ, 1992 ರಲ್ಲಿ ಸೋತ ಬಳಿಕ 30 ವರ್ಷ ಕಾದಿದ್ದರೂ ದೇವೇಗೌಡ ಪದೇ ಪದೇ ಹೇಳಿದ್ದರು. ಇದೊಂದು ಕೊನೆ ಪ್ರಯತ್ನ ನಡೆಸಿದ್ದರು. ಪ್ರಾರಂಭದಲ್ಲಿ ಭರವಸೆ ನೀಡಿ ಕೊನೆ ದಿನದಲ್ಲಿ ನಿಮ್ಮ ಹತ್ತಿರ ಹಣ ಇಲ್ಲ ಎಂದು ನಿರಾಕರಿಸಿದರು. ಮೂರು ಬಾರಿ ವಂಚಿತನಾಗಿ ಎರಡು ಬಾರಿ ಟಿಕೇಟ್ ಪಡೆದಿದ್ದೇನೆ. ಆದರೂ ಸಹಿಸಿಕೊಂಡು ದೇವೇಗೌಡ ರ ನಾಯಕತ್ವದಲ್ಲಿ ಪ್ರಾದೇಶಿಕ ಪಕ್ಷ ಉಳಿಸಲು ಶ್ರಮಿಸಿದ್ದರು. ಇಂತಹ ವೇಳೆ ಜಯರಾಂ ಅವರ ಜನಪ್ರಿಯತೆ ಪರಿಗಣಿಸದೇ ಪಕ್ಷ ಕ್ಕೆ ಸೇರ್ಪಡೆ ಮಾಡದ ರಾಮುಗೆ ಟಿಕೇಟ್ ನೀಡಿದ್ದು ನನಗೆ ಬೇಸರವಾಗಿ ಈ ನಿರ್ಣಯ ಕೈಗೊಳ್ಳಬೇಕಿತ್ತು.
ಎರಡು ಬಾರಿ ಶಾಸಕರಾಗಿ ಮಾಡಿದ್ದಕ್ಕೆ ಅವರು ಕೊಟ್ಟ ಕೊಡುಗೆಯೇ ಎಂದು ಪ್ರಶ್ನಿಸಬೇಕಿದೆ.ಅನೇಕ ಸಾರಿ ಎಚ್ ಡಿಡಿ ನ್ಯಾಯ ಒದಗಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ರಾಂತ ಪ್ರಾಂಶುಪಾಲ ಜಯರಾಂ ಮರಿತಿಬ್ಬೇಗೌಡರಿಗೆ ಸಾಥ್ ನೀಡಿದರು.