ಮೈಸೂರು:15 ಜೂನ್ 2022
ನಂದಿನಿ ಮೈಸೂರು
ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು
ಮತ ವಿಂಗಡಣೆ ವೇಳೆಯಲ್ಲಿ ಹಾಗೂ ಪ್ರಥಮ ಪ್ರಾಶ್ಯಸ್ತ್ಯದ ಮತ ಎಣಿಕೆ ಸಮಯದಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದನ್ನರಿತ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ಮಧ್ಯಾಹ್ನ 1.30 ಕ್ಕೆ ಊಟ ಮಾಡಿ ಬರುವುದಾಗಿ ಮತಕೇಂದ್ರದಿಂದ ಹೊರ ನಡೆದರು.
ಸಂಪೂರ್ಣ ಕಾಂಗ್ರೆಸ್ ಹಾಗೂ ಬಿಜೆಪಿ ಎಂಜೆಟರೇ ಹೆಚ್ಚಾಗಿದ್ದರು. ಈ ನಡುವೆ ಬೇಸರದಲ್ಲೇ ಮತ ಎಣಿಕೆ ಕೇಂದ್ರದಲ್ಲಿ ಇರುವ ಜೆಡಿಎಸ್ ನ ಕೆಲ ಎಜೆಂಟ್ ರುಗಳು ನಿದ್ದೆಗೆ ಜಾರಿರುವುದು ಕಂಡು ಬಂತು. ಆ ಮೂಲಕ ಹಿಡಿತ ಸಾಧಿಸಿದ್ದ ಜೆಡಿಎಸ್ ಮಕಾಡೆ ಮುಗ್ಗರಿಸುವ ಫಲಿತಾಂಶ ಎದುರು ನೋಡವಂತಹ ಸ್ಥಿತಿ ತಲುಪಿದೆ ಎಂಬ ಫಲಿತಾಂಶ ಮತಕೇಂದ್ರದಲ್ಲಿ ನ ಮಾತುಗಳಾಗಿದೆ.
ಹಾಲಿ ಸದಸ್ಯರಿದ್ದ ಕ್ಷೇತ್ರದಲ್ಲೇ ಮೂರನೇ ಸ್ಥಾನಕ್ಕೆ ಕುಸಿದು ಮುಖಭಂಗ ಅನುಭವಿಸಿರುವ ಜೆಡಿಎಸ್ ನ ಮತ ಎಣಿಕೆಯ ಎಜೆಂಟ್ ಗಳು ನಿದ್ದೆಗೆ ಜಾರಿರುವ ಪ್ರಸಂಗ ನಡೆಯಿತು.