50 ಸಾವಿರ ಮತ ಎಣಿಕೆ ಮುಕ್ತಾಯ 49 ಸಾವಿರ ಎಣಿಕೆ ಆಗಬೇಕಿದೆ:ಜೆಸಿ ಪ್ರಕಾಶ್

ಮೈಸೂರು:15 ಜೂನ್ 2022

ನಂದಿನಿ ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಬೆಳಗ್ಗೆಯಿಂದ ಇದುವರೆಗೂ 50 ಸಾವಿರ ಮತ ಎಣಿಕೆ ಮಾಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ
ಜಿ ಸಿ ಪ್ರಕಾಶ್ ಮಾಹಿತಿ ನೀಡಿದರು.

ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ
16137,ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್
13479,ಜೆಡಿಎಸ್ ಅಭ್ಯರ್ಥಿ
ಹೆಚ್.ಕೆ.ರಾಮು 8512,ಚನ್ನಕೇಶವ 1418,
ಪ್ರಸನ್ನ 3142,ವಿನಯ್ 1890 ಮತ ಪಡೆದಿದ್ದಾರೆ.
3711 ಕುಲಗೆಟ್ಟ ಮತ.ಕಾಂಗ್ರೆಸ್ 2658 ಮತ ಪಡೆದು ಮುಂದೆ ಸಾಗುತ್ತಿದೆ.
49 ಸಾವಿರ ಮತ ಎಣಿಕೆ ಮಾಡಬೇಕಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *