ನಂದಿನಿ ಮೈಸೂರು
ನನ್ನ ಮೇಲಿದ್ದ ಆರೋಪಗಳಿಂದ ಮುಕ್ತ ನಾಗಿದ್ದೇನೆ.ನ್ಯಾಯಾಲಯದಿಂದಲೂ ನನ್ನ ಪ್ರಕರಣಕ್ಕೆ ಬಿ ರಿಪೋರ್ಟ್ ನೀಡುವ ಮೂಲಕ ಸುಳ್ಳು ಮೊಕದ್ದಮೆ ದಾಖಲಿಸಿರುವುದು ಸಾಬೀತಾಗಿದೆ ಎಂದು ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಡಾ.ಎಂ.ಬಿ.ಮಂಜೇಗೌಡ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ.
ಮೆಡಿಕಲ್ ಸೀಟ್ ವಿಚಾರವಾಗಿ ಐಗ್ರೌಂಡ್ ಪೋಲಿಸ್ ಠಾಣೆಯಲ್ಲಿ ಯಾರೋ ನನ್ನ ವಿರುದ್ದ ದೂರು ದಾಖಲಿಸಿದ್ದಾರೆ.ಮಾರ್ಚ್ 7 ರಂದು ನಾನು ಬೆಂಗಳೂರಿನಲ್ಲಿ ಇರಲೇ ಇಲ್ಲ.ಅಂದು ನಾನು ಸಿಕ್ಕಿಂ ರಾಜ್ಯಕ್ಕೆ ಪ್ರವಾಸ ತೆರಳಿದ್ದೇ.ನಾನು ಅಲ್ಲಿದ್ದೇ ಎಂಬುದಕ್ಕೆ ವಿಮಾನ,ಹೋಟೆಲ್ ದಾಖಲೆಗಳಿವೆ.ನನ್ನನ್ನಲ್ಲದೇ ನನ್ನ ಪತ್ನಿ ಅವರ ವಿರುದ್ದವೂ ಆರೋಪಿಸಿದ್ದಾರೆ.ಅವರು ಕೂಡ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಖಲೆಗಳಿವೆ.ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ.
ಒಕ್ಕಲಿಗರ ಸಂಘಕ್ಕೆ ಚ್ಯುತಿ ಬಾರದಂತೆ ಹಿಂದೆಯೂ ನಡೆದಿದ್ದೇನೆ.ಮುಂದೆಯೂ ಇರುತ್ತೇನೆ.ಗೊಂದಲ ಬೇಡ.ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಲವರು ಒತ್ತಾಯಿಸಿದರು ರಾಜೀನಾಮೆ ಕೊಡುವಂತಹ ತಪ್ಪೇನು ನಾನು ಮಾಡಿಲ್ಲ.ನನ್ನ ವಿರುದ್ದದ ಆರೋಪ ಸುಳ್ಳಾಗಿದೆ ಎಂದು ನ್ಯಾಯಾಲಯ ಹೇಳಿದೆ.ನಾನು ರಾಜೀನಾಮೆ ಕೊಡುವ ಅಗತ್ಯವಿಲ್ಲ.
ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.